ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಟಿಕೆಟ್ ಇಲ್ಲದೆ ಬೆಂಗಳೂರು-ಚೆನ್ನೈ ರೈಲಿನ ಟಾಪ್ ಮೇಲೆ ಪ್ರಯಾಣ, ಪ್ರಯಾಣಿಕನಿಗೆ ಕರೆಂಟ್ ಶಾಕ್!

ಟಿಕೆಟ್ ಪಡೆಯದೆ ಬೆಂಗಳೂರು-ಚೆನ್ನೈ ರೈಲಿನ ಟಾಪ್ ಮೇಲೆ ಕುಳಿತು ಪ್ರಯಾಣಿಸಿ ಯುವಕನೋರ್ವ ವಿದ್ಯುತ್ ಶಾಕ್ ಹೊಡೆಸಿಕೊಂಡಿದ್ದಾನೆ...

ರೈಲು
Vishwanath S
Updated On : 1 Aug 2018, 1:52 am
ಬೆಂಗಳೂರು: ಟಿಕೆಟ್ ಪಡೆಯದೆ ಬೆಂಗಳೂರು-ಚೆನ್ನೈ ರೈಲಿನ ಟಾಪ್ ಮೇಲೆ ಕುಳಿತು ಪ್ರಯಾಣಿಸಿ ಯುವಕನೋರ್ವ ವಿದ್ಯುತ್ ಶಾಕ್ ಹೊಡೆಸಿಕೊಂಡಿದ್ದಾನೆ. 
ಹುಬ್ಬಳ್ಳಿ ಮೂಲದ 31 ವರ್ಷದ ವಿಜಯ್ ಕುಮಾರ್ ಗೆ ವಿದ್ಯುತ್ ಶಾಕ್ ಹೊಡೆದು ಸುಟ್ಟ ಗಾಯಗಳಾಗಿವೆ ಎಂದು ಆರ್ಪಿಎಫ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 
ಸೋಮವಾರ ಕಳೆದ ರಾತ್ರಿ ವಿಜಯ್ ಕುಮಾರ್ ಟಿಕೆಟ್ ಪಡೆಯದೆ ರೈಲು ಇಂಜಿನ ಬಳಿ ಇರುವ ಜನರಲ್ ಕೋಚ್ ಮೇಲೆ ಹತ್ತಿ ಕುಳಿತುಕೊಂಡಿದ್ದಾನೆ. ರೈಲು ಬಂಗಾರಪೇಟೆ ಮತ್ತು ಗುಡುಪಲ್ಲಿ ದಾಟಿ ಕೊಪ್ಪಂಗೆ ಪ್ರಯಾಣಿಸುತ್ತಿತ್ತು. ಈ ವೇಳೆ ವಿಜಯ್ ಕುಮಾರ್ ಗೆ ರೈಲಿನ ಮೇಲೆ ಅಳವಡಿಸಿದ್ದ ವಿದ್ಯುತ್ ಕಂಬಿ ತಗುಲಿ ಕೆಳಗೆ ಬಿದ್ದಿದ್ದಾನೆ ಇದನ್ನು ಗಮನಿಸಿದ ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದಾರೆ. 

Advertisement

Advertisement

ಬಳಿಕ ವಿಜಯ್ ನನ್ನು ಕುಪ್ಪಂ ರೈಲ್ವೆ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಿ ಆ್ಯಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯ್ ನನ್ನು ಪರೀಕ್ಷಿಸಿದ ವೈದ್ಯರು ಶೇ. 50ರಷ್ಟು ಸುಟ್ಟ ಗಾಯಗಳಾಗಿದ್ದು ಪ್ರಾಣಾಪಾಯವಿಲ್ಲ ಎಂದು ತಿಳಿಸಿದ್ದಾರೆ. 
ಬೆಳಗ್ಗೆ ಎದು ನೋಡಿದಾಗ ವಿಜಯ್ ಕುಮಾರ್ ನಾಪತ್ತೆಯಾಗಿದ್ದು ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement