ರಾಜ್ಯ

'ಸ್ವಚ್ಛ ಜಯತೇ' ಅಭಿಯಾನ ಆರಂಭಿಸಿದ ರಾಜ್ಯ ಸರ್ಕಾರ

Sumana Upadhyaya

ಬೆಂಗಳೂರು: ಸ್ವಚ್ಛತೆ ಬಗ್ಗೆ ಗ್ರಾಮೀಣ ಕರ್ನಾಟಕದ ಜನರು ಪ್ರತಿಜ್ಞೆ ತೆಗೆದುಕೊಳ್ಳುವ ಸ್ವಚ್ಛಮೇವ ಜಯತೇ ಅಭಿಯಾನವನ್ನು ರಾಜ್ಯ ಸರ್ಕಾರ ಆರಂಭಿಸಿದೆ. ನಿನ್ನೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರ ಸಮ್ಮುಖದಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳು ಪ್ರತಿಜ್ಞೆ ತೆಗೆದುಕೊಂಡರು.

ಪ್ರಕೃತಿಯ ನಾಗರಿಕರಾದ ನಾವು ಸುತ್ತಮುತ್ತಲ ಭೂಮಿ ಮತ್ತು ಪರಿಸರವನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅಭಿಯಾನವನ್ನು ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಅಭಿಯಾನದ ಚಿಹ್ನೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿದೆ. ಅದರಲ್ಲಿ ಕರ್ನಾಟಕದ ಭೂಪಟದ ಮುಂದೆ ಬಾಲಕ ಮತ್ತು ಬಾಲಕಿಯ ಚಿತ್ರಗಳಿವೆ. ಈ ಸಂದೇಶವನ್ನು ರಾಜ್ಯದ ಉದ್ದಗಲಕ್ಕೂ ಕೊಂಡೊಯ್ಯಲು ಮಕ್ಕಳ ಮೇಲೆ ಕೇಂದ್ರೀಕರಿಸಿ ಸಂದೇಶವನ್ನು ಸಾರುವಂತೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಸ್ವಚ್ಛ ಭಾರತ್ ಮಿಷನ್ ನಡಿ ಕುಡಿಯುವ ನೀರು ಮತ್ತು ಸ್ವಚ್ಛತೆಯ ಅಭಿಯಾನವಾದ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 ಅಭಿಯಾನಕ್ಕೆ ಪೂರಕವಾಗಿ ಈ ಸ್ವಚ್ಛಮೇವ ಜಯತೆ ಇರುತ್ತದೆ. ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 ಅಭಿಯಾನ ಆಗಸ್ಟ್ 1ರಿಂದ 31ರವರೆಗೆ ನಡೆಯುತ್ತಿದೆ. ಸಮೀಕ್ಷೆಯಡಿ 698 ಜಿಲ್ಲೆಗಳು, 6,980 ಗ್ರಾಮಗಳು ಮಡತ್ತು 34,900 ಸಾರ್ವಜನಿಕ ಸ್ಥಳಗಳನ್ನು ದೇಶಾದ್ಯಂತ ಆಯ್ಕೆಮಾಡಿಕೊಳ್ಳಲಾಗಿದೆ.

SCROLL FOR NEXT