ಸಂಗ್ರಹ ಚಿತ್ರ 
ರಾಜ್ಯ

ನೊಂದಣಿ ಅಧಿಕಾರಿಗಳ ಎಡವಟ್ಟು: ಒಬ್ಬಳೇ ಯುವತಿಗೆ ಇಬ್ಬರೊಡನೆ ವಿವಾಹ!

ಒಬ್ಬಳೇ ಯುವತಿಗೆ ಇಬ್ಬರು ಯುವಕರೊಡನೆ ಮದುವೆ, ಇದಕ್ಕೆ ವಿವಾಹ ನೊಂದಣಾಧಿಕಾರಿಗಳ ಸಾಕ್ಷಿ! ಕೇಳಿ ನಿಮಗೆ ಅಚ್ಚರಿ ಎನಿಸಬಹುದು, ಆದರೆ ಇದು ಸತ್ಯ.

ಕಾರವಾರ: ಒಬ್ಬಳೇ ಯುವತಿಗೆ ಇಬ್ಬರು ಯುವಕರೊಡನೆ ಮದುವೆ, ಇದಕ್ಕೆ ವಿವಾಹ ನೊಂದಣಾಧಿಕಾರಿಗಳ ಸಾಕ್ಷಿ! ಕೇಳಿ ನಿಮಗೆ ಅಚ್ಚರಿ ಎನಿಸಬಹುದು, ಆದರೆ ಇದು ಸತ್ಯ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಯುವತಿಯೊಬ್ಬಳಿಗೆ ವಿವಾಹ ನೊಂದಣಾಧಿಕಾರಿಗಳ ಸಮ್ಮುಖದಲ್ಲೇ ಇಬ್ಬರು ಯುವಕರೊಡನೆ ಮದುವೆ ಆಗಿದೆ.
ಈ ಎರಡೂ ವಿವಾಹವನ್ನು ವಿವಾಹ ನೊಂದಣಿ ಅಧಿಕಾರಿಗಳು ನೊಂದಣಿ ಮಾಡಿಸಿದ್ದಾರೆ. 
ಘಟನೆ ವಿವರ
ಯುವತಿಯು ಯಲ್ಲಾಪುರದ ಗಣಪತಿ ಭಟ್ ಎನ್ನುವವರನ್ನು ಪ್ರೀತಿಸಿ ಕಳೆದ ಒಂಭತ್ತು ತಿಂಗಳ ಹಿಂದೆ ಪೋಷಕರ ವಿರೋಧವನ್ನು ಲೆಕ್ಕಿಸದೆ ಯಲ್ಲಾಪುರದ ವಿವಾಹ ನೊಂದಣಿ ಕೇಂದ್ರದಲ್ಲಿ ವಿವಾಹ ಮಾಡಿಕೊಂಡಿದ್ದಾಳೆ.ಹೀಗೆ ವಿವಾಹವಾದ ಕೆಲ ದಿನಗಳ ಬಳಿಕ ಆಕೆಯ ತಂದೆ ತಾಯಿ ತಾವೂ ಈ ವಿವಾಹಕ್ಕೆ ಒಪ್ಪಿಗೆ ಕೊಟ್ಟಿರುವುದಾಗಿ ಹೇಳಿ ಮಗಳನ್ನು ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ಪೋಷಕರ ಮಾತು ನಂಬಿದ ಯುವತಿಅವಳ ತಂದೆ-ತಾಯಿಯ ಮನೆಗೆ ತೆರಳಿದ್ದಾಳೆ.
ಆದರೆ ಯುವತಿಯ ಪೋಷಕರು ಆಕೆ ವೊವಾಹವಾಗಿದ್ದ ಗಣಪತಿ ಭಟ್ ನನ್ನು ಮರೆಯಬೇಕೆಂದು ಆಕೆಯ ಮನವೊಲಿಸಿದ್ದಾರೆ. ಅಲ್ಲದೆ ಆಗಸ್ಟ್ 5ರಂದು ಯುವತಿಗೆ ರಾಜೇಶ್ ಎನ್ನುವವನೊಂದಿಗೆ ವಿವಾಹ ನೆರವೇರಿಸಿದ್ದಾರೆ. ಈ ವಿವಾಹವನ್ನು ಸಹ ಆಕೆಯ ಪೋಷಕರು ಕಾರವಾರ ವಿವಾಹ ನೊಂದಣಿ ಕೇಂದ್ರದಲ್ಲಿ ನೊಂದಾಯಿಸಿದ್ದಾರೆ. 
ಇತ್ತ ರಿಜಿಸ್ಟಾರ್ ಕಛೇರಿ ಅಧಿಕಾರಿಗಳು ಸಹ ಯಲ್ಲಾಪುರ ಕಛೇರಿಯಲ್ಲಿ ಆಕೆಗೆ ವಿವಾಹವಾಗಿರುವ ಬಗ್ಗೆ ನೊಂದಣಿಯಾಗಿರುವುದು ತಿಳಿದೂ ಮತ್ತೊಮ್ಮೆ ಅದೇ ಯುವತಿಯ ವಿವಾಹ ನೊಂದಣಿ ಮಾಡಿಸಿಕೊಂಡು ಎಡವಟ್ಟು ಮಾಡಿದ್ದಾರೆ.
ಯುವತಿಯ ಮೊದಲ ಪತಿ ಗಣಪತಿ ತನ್ನ ಪತ್ನಿಯನ್ನು ಮನೆಗೆ ಕರೆದೊಯ್ಯಲು ಬಂದಾಗ ವಿಷಯ ಬೆಳಕಿಗೆ ಬಂದಿದೆ. ಪತ್ನಿ ಬೇರೊಬ್ಬನೊಂದಿಗೆ ಇರುವುದು ಕಂಡ ಆತ ತನ ಪತ್ನಿಯನ್ನು ತನಗೊಪ್ಪಿಸಬೇಕೆಂದು ಪಟ್ಟು ಹಿಡಿದ್ದಾನೆ. ಅದಕ್ಕಾಗಿ ಯಲ್ಲಾಪುರ ಪೋಲೀಸರಿಗೆ ದೂರಿತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

KPSC ನೇಮಕಾತಿ ಹಗರಣ: DGP ಅಲೋಕ್ ಕುಮಾರ್ ಸೇರಿ SIT ತಂಡದಿಂದ ಇಬ್ಬರು ಔಟ್; ಸುಪ್ರೀಂಕೋರ್ಟ್ ಮಹತ್ವದ ಸೂಚನೆ!