ರಾಜ್ಯ

ಸರ್ಕಾರಿ ಶಾಲೆಗಳಲ್ಲಿ ಸದ್ಯದಲ್ಲಿಯೇ ಆನ್ ಲೈನ್ ಹಾಜರಿ ವ್ಯವಸ್ಥೆ ಜಾರಿ

Sumana Upadhyaya

ಬೆಂಗಳೂರು: ನಗರದ ಕೆಲವು ಆಯ್ದ ಸರ್ಕಾರಿ ಶಾಲೆಗಳಲ್ಲಿ ಮುಂದಿನ ವಾರದಿಂದ ಆನ್ ಲೈನ್ ಮೂಲಕ ವಿದ್ಯಾರ್ಥಿಗಳ ಹಾಜರಾತಿ ತೆಗೆದುಕೊಳ್ಳಲಾಗುತ್ತದೆ.

ಶಾಲೆಗಳಲ್ಲಿ ಈಗಿರುವ ಆಫ್ ಲೈನ್ ಹಾಜರಾತಿ ವ್ಯವಸ್ಥೆಯಲ್ಲಿರುವ ಗೊಂದಲಗಳನ್ನು ಪರಿಶೀಲಿಸಿ ಸಾರ್ವಜನಿಕ ನಿರ್ದೇಶನ ಇಲಾಖೆಯು ಸರ್ವಶಿಕ್ಷಾ ಅಭಿಯಾನ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಸಾಫ್ಟ್ ವೇರ್ ಮತ್ತು ಮೊಬೈಲ್ ಆಪ್ ನ್ನು ವಿನ್ಯಾಸಗೊಳಿಸಿದೆ. ಇದರ ಮೂಲಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಹಾಜರಾತಿಯನ್ನು ಆನ್ ಲೈನ್ ನಲ್ಲಿ ನಮೂದಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಹೊಸ ವ್ಯವಸ್ಥೆಯನ್ನು ಪ್ರಾಯೋಗಿಕ ಆಧಾರದ ಮೇಲೆ ಕೆಲವು ಆಯ್ದ ಶಾಲೆಗಳಲ್ಲಿ ಆರಂಭಿಸಲಾಗುತ್ತದೆ. ಇಂಟರ್ನೆಟ್ ವ್ಯವಸ್ಥೆಗಳಿಲ್ಲದಿರುವ ಶಾಲೆಗಳಲ್ಲಿ ಮೊಬೈಲ್ ಆಪ್ ಗಳನ್ನು ಬಳಸಲಾಗುತ್ತದೆ. 10 ಸಾವಿರ ಸರ್ಕಾರಿ ಶಾಲೆಗಳಲ್ಲಿ ಜಾರಿಗೆ ತರುವ ಉದ್ದೇಶ ಸರ್ಕಾರದ ಮುಂದಿದೆ.

ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಇದನ್ನು ಜಾರಿಗೆ ತರುವುದು ಕಷ್ಟ. ಇದನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳಿಗೆ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ. ಆಫ್ ಲೈನ್ ಮೂಲಕ ವಿದ್ಯಾರ್ಥಿಗಳ ಹಾಜರಿಯನ್ನು ನಮೂದಿಸಿ ನಂತರ ಕಂಪ್ಯೂಟರ್ ನಲ್ಲಿ ಅಪ್ ಟೇಡ್ ಮಾಡುವುದು, ಎರಡನೆಯದ್ದು ಮೊಬೈಲ್ ಆಪ್ ಬಳಸಬಹುದು ಎಂದು ಸರ್ವ ಶಿಕ್ಷ ಅಭಿಯಾನದ ಅಧಿಕಾರಿಗಳು ಹೇಳುತ್ತಾರೆ.

SCROLL FOR NEXT