ರಾಜ್ಯ

ಈ ವರ್ಷ ಸ್ವಾತಂತ್ರ್ಯ ದಿನಾಚರಣೆಗೆ ನಗರದಲ್ಲಿ ಜಾಹಿರಾತುಗಳ ಹಾವಳಿಗೆ ಮುಕ್ತಿ?

Sumana Upadhyaya

ಬೆಂಗಳೂರು: ಹೈಕೋರ್ಟ್ ನ ಆದೇಶವನ್ನು ಈ ಬಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸರಿಯಾಗಿ ಪಾಲಿಸಿದರೆ ಫ್ಲೆಕ್ಸ್ ಬೋರ್ಡ್ ಗಳು, ಕಟೌಟ್, ಬ್ಯಾನರ್ ಗಳಿಗೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮುಕ್ತಿ ಸಿಗಲಿದೆ.

ನಿನ್ನೆ ಅರ್ಜಿಯೊಂದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಾಧೀಶ ಆರ್ ದೇವದಾಸ್ ಅವರನ್ನೊಳಗೊಂಡ ನ್ಯಾಯಪೀಠ, ಬಿಬಿಎಂಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು ಹೊಸ ಜಾಹಿರಾತು ನೀತಿಯ ಕುರಿತು ಕೋರ್ಟ್ ನೀಡಿರುವ ಆದೇಶವನ್ನು ಪಾಲಿಸದೆ ಅದರ ತಾಳ್ಮೆಯನ್ನು ಪರೀಕ್ಷೆ ಮಾಡುವುದು ಬೇಡ ಎಂದು ಎಚ್ಚರಿಕೆ ನೀಡಿದೆ. ಆಗಸ್ಟ್ 14ರೊಳಗೆ ನಗರದಲ್ಲಿರುವ ಎಲ್ಲಾ ಫ್ಲೆಕ್ಸ್, ಬ್ಯಾನರ್ ಗಳು, ಬಂಟಿಂಗ್ಸ್ ಗಳನ್ನು ತೆಗೆಯಬೇಕೆಂದು ಆದೇಶ ನೀಡಿದೆ.

ಅನಧಿಕೃತ ಹೋರ್ಡಿಂಗ್ಸ್ ಗಳನ್ನು ಅಂಟಿಸುವ ವ್ಯಕ್ತಿಗಳನ್ನು ಹೆದರಿಸದೆ ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಿಸುವ ಬಿಬಿಎಂಪಿಗೆ ಕೋರ್ಟ್ ಛಾಟಿಯೇಟು ಬೀಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಶೇಕಡಾ 95ರಷ್ಟು ಫ್ಲೆಕ್ಸ್ ಗಳನ್ನು ತೆಗೆದುಹಾಕಲಾಗಿದೆ ಎಂದು ಬಿಬಿಎಂಪಿ ಪರ ವಕೀಲರು ವರದಿ ಸಲ್ಲಿಸಿದ ನಂತರ ಅನಧಿಕೃತ ಹೋರ್ಡಿಂಗ್ಸ್ ಗಳಿಗೆ ಸಂಬಂಧಪಟ್ಟ 12 ಎಫ್ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ಹೇಳಿದೆ.

ಆದರೆ ಇದಕ್ಕೆ ತೃಪ್ತಿ ಹೊಂದದ ನ್ಯಾಯಾಲಯ, ಬಿಬಿಎಂಪಿ ಬೆಂಗಳೂರನ್ನು ಫ್ಲೆಕ್ಸ್, ಹೋರ್ಡಿಂಗ್ಸ್ ಗಳಿಂದ ಮುಕ್ತಿಗೊಳಿಸಲು ನಿರ್ಧರಿಸಿದೆಯೇ? ಮುಂದಿನ ವಿಚಾರಣೆ ಸಂದರ್ಭದಲ್ಲಿ ನಿಮ್ಮ ಕಡೆಯಿಂದ ಯಾವುದೇ ತಪ್ಪುಗಳಾಗಬಾರದು ಎಂದು ಬಿಬಿಎಂಪಿ ಪರ ವಕೀಲರು ತಿಳಿಸಿದ್ದಾರೆ.

SCROLL FOR NEXT