ಕೋಲಾರ :ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸರ್ಕಾರದ ಹಾಸನ ಕೇಂದ್ರಿತ ನಡೆಯ ವಿರುದ್ಧ ಉತ್ತರ ಕರ್ನಾಟಕ ಮಾತ್ರವಲ್ಲಾ, ದಕ್ಷಿಣ ಭಾಗದ ಜನರು ಕೂಡಾ ಅಸಮಾಧಾನಗೊಂಡಿದ್ದಾರೆ.
ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆ -ಕೆ-ಶಿಫ್ ಕಚೇರಿಯನ್ನು ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರ ಮಾಡಿದ್ದಕ್ಕೆ ಮುಂಬೈ- ಕರ್ನಾಟಕ ಭಾಗದ ಜನರು ವಿನಾಯಿತಿ ನೀಡಿದ ನಂತರ ಈಗ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹಾಸನ ನೀತಿಯ ವಿರುದ್ಧ ಆಕ್ರೋಶ ಗೊಂಡಿದ್ದಾರೆ.
ಕೋಲಾರ -ಚಿಕ್ಕಬಳ್ಳಾಪುರ ಜಿಲ್ಲೆ ಸಹಕಾರ ಹಾಲು ಉತ್ಪಾದಕರ ಒಕ್ಕೂಟ - ಕೊಮುಲ್ ಪ್ರತಿವರ್ಷ 80 ಲಕ್ಷ ಲೀಟರ್ ಹಾಲನ್ನು ಉತ್ತರ ಹಾಗೂ ದಕ್ಷಿಣ ಸಶಸ್ತ್ರ ಪಡೆ ಸಿಬ್ಬಂದಿಗೆ ಪೂರೈಸುತ್ತದೆ. ಇದನ್ನು ಭಾರತೀಯ ರಾಷ್ಟ್ರೀಯ ಸಹಕಾರ ಹಾಲು ಒಕ್ಕೂಟ ಮೇಲ್ವಿಚಾರಣೆ ನಡೆಸುತ್ತದೆ.
80 ಲಕ್ಷ ಲೀಟರ್ ಹಾಲನ್ನು ಕೋಲಾರ - ಚಿಕ್ಕಬಳ್ಳಾಪುರ ಹಾಗೂ ಹಾಸನ ಡೈರಿ ನಡುವೆ ಸಮಾನವಾಗಿ ಹಂಚಿಕೆ ಮಾಡುವಂತೆ ರಾಜ್ಯ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಎನ್ ಸಿಡಿಎಫ್ ಐಗೆ ಪತ್ರ ಬರೆದಿದೆ. ಇದಕ್ಕೆಲ್ಲಾ ಲೋಕೋಪಯೋಗಿ ಸಚಿವ ಹೆಚ್. ಡಿ. ರೇವಣ್ಣ ಅವರೇ ಕಾರಣ ಎಂದು ಹಾಲು ಉತ್ಪಾದಕರು ಆರೋಪಿಸಿದ್ದಾರೆ.
ಸರ್ಕಾರದ ಇತ್ತೀಚಿನ ನಡೆಯಿಂದ ಹಾಲು ಉತ್ಪಾದಕರಿಗೆ ವಾರ್ಷಿಕ 23 ಕೋಟಿ ರೂಪಾಯಿ ವ್ಯವಹಾರ ನಷ್ಟವಾಗುತ್ತಿದೆ ಎಂದು ಕೊಮುಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಉಳಿದ 40 ಲಕ್ಷ ಲೀಟರ್ ಹಾಲನ್ನು ಹೇಗೆ ಪೌಂಡರ್ ಆಗಿ ಹೇಗೆ ಪರಿವರ್ತಿಸುವುದು ಅನ್ನೋದು ಮತ್ತೊಂದು ಪ್ರಮುಖ ಸಮಸ್ಯೆ. ಇದಕ್ಕಾಗಿ 8 ರಿಂದ 9 ಲೀಟರ್ ಬೇಕಾಗುತ್ತದೆ. ಅಂದಾಜು 36 ಕೋಟಿ ನಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ರೇವಣ್ಣ ಅವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಸರ್ಕಾರದ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಟೆಟ್ರಾ ಪ್ಯಾಕ್ ಘಟಕ ಕೋಲಾರದಲ್ಲಿ 1991ರಲ್ಲಿಯೇ ಸ್ಥಾಪನೆಗೊಂಡಿದ್ದರೆ ಕಳೆದ ಎರಡು ವರ್ಷಗಳ ಹಿಂದಷ್ಟೇ ಈ ಘಟಕ ಹಾಸನದಲೂ ಆರಂಭಗೊಂಡಿದೆ. ಕಳೆದ 10 ವರ್ಷಗಳಿಂದ ಉತ್ತರ ಹಾಗೂ ಪಶ್ಚಿಮ ಕಮಾಂಡ್ ಕರೆಯಲ್ಪಡುತ್ತಿದ್ದ ಟೆಂಡರ್ ನಲ್ಲಿ ಕೆಎಂಫ್ ಪಾಲ್ಗೊಳ್ಳುತಿತ್ತು ಎಂದು ಕೊಮುಲ್ ಮತ್ತೊಬ್ಬ ಹಿರಿಯ ಅಧಿಕಾರಿ ಹೇಳಿದ್ದಾರೆ.
ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ರೇವಣ್ಣ ಹಾಲು ಒಕ್ಕೂಟಗಳ ಅಭಿವೃದ್ದಿಗೆ ಮೆರೆಯಲಾಗದಂತ ಕೂಡುಗೆ ನೀಡಿದ್ದಾರೆ. ಪ್ರತಿಪಕ್ಷ ಬಿಜೆಪಿ ಪ್ರಚಾರಕ್ಕಾಗಿ ಕೆಲ ವಿವಾದ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.