ಸೆಪ್ಟೆಂಬರ್ ಮಧ್ಯಭಾಗದಿಂದ 2ನೇ ಆರು ಬೋಗಿಯ ಮೆಟ್ರೋ ರೈಲು ಸಂಚಾರ ಆರಂಭ
ಮುಂದಿನ ತಿಂಗಳ ಮಧ್ಯಭಾಗದಿಂದ ಮತ್ತೊಂದು ಆರು ಬೋಗಿಯ ಮೆಟ್ರೋ ರೈಲು ಸಂಚಾರ ಆರಂಭಿಸಲಿದೆ.
ಬೆಂಗಳೂರು: ಮುಂದಿನ ತಿಂಗಳ ಮಧ್ಯಭಾಗದಿಂದ ಮತ್ತೊಂದು ಆರು ಬೋಗಿಯ ಮೆಟ್ರೋ ರೈಲು ಸಂಚಾರ ಆರಂಭಿಸಲಿದೆ.
ಆಗಸ್ಟ್ ತಿಂಗಳಲ್ಲಿಯೇ ಎರಡನೇ ಘಟಕವನ್ನು ಪೂರೈಕೆ ಮಾಡಲಾಗುವುದು, ಆದಾಗ್ಯೂ, ಎಲ್ಲಾ ಸುರಕ್ಷತಾ ಅನುಮತಿಗಳನ್ನು ಪಡೆಯಬೇಕಾಗಿರುವುದರಿಂದ ಸಾರ್ವಜನಿಕ ಬಳಕೆಗಾಗಿ 30-45 ದಿನಗಳ ಹೆಚ್ಚಿನ ದಿನವನ್ನು ಬಿಎಂಆರ್ ಸಿಎಲ್ ತೆಗೆದುಕೊಳ್ಳುತ್ತಿದೆ ಎಂದು ಬಿಇಎಂಎಲ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಸೆಪ್ಟೆಂಬರ್ ಮಧ್ಯಭಾಗದಿಂದ ಮತ್ತೊಂದು ಆರು ಬೋಗಿಗಳ ರೈಲು ಕಾರ್ಯಾಚರಣೆ ನಡೆಸಲಿದ್ದು, ಅಕ್ಟೋಬರ್ ತಿಂಗಳಲ್ಲಿ ಮೂರನೇ ಆರು ಬೋಗಿಯ ರೈಲು ಸಂಚಾರ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ತಿಳಿಸಿದ್ದಾರೆ.
ಜೂನ್ 22 ರಿಂದ ಮೊದಲ ಆರು ಬೋಗಿಯ ರೈಲು ಕಾರ್ಯಾಚರಣೆ ಆರಂಭಿಸಿದ್ದು ಪ್ರಯಾಣಿಕರಲ್ಲಿ ಸಾಕಷ್ಟು ಜನಪ್ರಿಯಗೊಂಡಿದೆ ಎಂದು ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯು.ಎ.ವಸಂತ್ ರಾವ್ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.