ಸಾಂದರ್ಭಿಕ ಚಿತ್ರ 
ರಾಜ್ಯ

ಮೈಸೂರು ಸಿಲ್ಕ್ ಸೀರೆ ಖರೀದಿಸಲು ಆಧಾರ್ ಕಡ್ಡಾಯ: ಸಚಿವ ಸಾ.ರಾ ಮಹೇಶ್!

ಸ್ವಾತಂತ್ರ್ಯ ದಿನಾಚರಣೆ ಮತ್ತು ವರಮಹಾಲಕ್ಷ್ಮಿ ಹಬ್ಬಕ್ಕೆ ಆಫರ್ ನಲ್ಲಿ ಮೈಸೂರು ಸಿಲ್ಕ್ ಸೀರೆ ಖರೀದಿಸುವಾಗ ಗ್ರಾಹಕರು ಕಡ್ಡಾಯವಾಗಿ ಆಧಾರ್ ಕಾರ್ಡ್ ...

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಮತ್ತು ವರಮಹಾಲಕ್ಷ್ಮಿ ಹಬ್ಬಕ್ಕೆ ಆಫರ್ ನಲ್ಲಿ ಮೈಸೂರು ಸಿಲ್ಕ್ ಸೀರೆ ಖರೀದಿಸುವಾಗ ಗ್ರಾಹಕರು ಕಡ್ಡಾಯವಾಗಿ ಆಧಾರ್ ಕಾರ್ಡ್ ತೋರಿಸಬೇಕಿದೆ.
ಮೈಸೂರು ಸಿಲ್ಕ್ ಸೀರೆ ಬಗ್ಗೆ ಅಪಾರವಾಗಿ ಪ್ರೀತಿ ಹೊಂದಿರುವ ಮಹಿಳೆಯರಿಗಾಗಿ ಈ ವಿಶೇಷ ಸೇಲ್ ಆಯೋಜಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 7ಸಾವಿರ ಬೆಲೆಯ ಸೀರೆ 4 ಸಾವಿರಕ್ಕೆ  ಮತ್ತು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 15 ಸಾವಿರ ರು ಬೆಲೆಯ ಸೀರೆ 4 ಸಾವಿರ ರು ಗೆ ಮಾರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.
ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಹಾಗೂ ಮೈಸೂರು ಸಿಲ್ಕ್ ಸೀರೆ ಖರೀದಿಸಬೇಕೆಂಬ ಆಸೆ ಹೊಂದಿರುವಲರ ಬಯಕೆ ಪೂರೈಸಲು  ಈ ಸೇಲ್ ಆಯೋಜಿಸಲಾಗಿದೆ,  ಗ್ರಾಹಕರು ತಮ್ಮ ಆಧಾರ್ ಕಾರ್ಡ್ ತೋರಿಸಿ  ಕೆಎಸ್ ಐಸಿ ಶೋ ರೂಂ ನಿಂದ ಖರೀದಿಸಬಹುದು. ಒಂದು ಬಾರಿ ಆಫರ್ ನಲ್ಲಿ ಖರೀದಿಸಿದವರು ಮತ್ತೆ  ಮುಂದಿನ ಐದು ವರ್ಷಗಳಲ್ಲಿ ಖರೀದಿಸುವ ಆಗಿಲ್ಲ,  ಈ ಸ್ಕೀಮ್ ದುರಪಯೋಗ ಆಗಬಾರದೆಂದು ಆಧಾರ್ ಕಡ್ಡಾಯ ಮಾಡಲಾಗಿದೆ.
ಕೆಎಸ್ಐಸಿ ವಾರ್ಷಿಕವಾಗಿ 10ಕೋಟಿ ರು ವಾರ್ಷಿಕ ಹೊರೆಯಾಗಿದೆ,  ಅದನ್ನು ಬಂದ ಆದಾಯವನ್ನು ತ್ಯಾಗ ಮಾಡುತ್ತಿದ್ದೇವೆ  ಎಂದು ಹೇಳಿದ್ದಾರೆ ಆಯ್ದ ಔಟ್ ಲೆಟ್ ಗಳಲ್ಲಿ  ಮಾರಾಟ ಮಾಡಲಾಗುತ್ತದೆ.  ಬೆಂಗಳೂರಿನ ಎರಡು ಶೋ ರೂಂ, ಮೈಸೂರು, ಚನ್ನಪಟ್ಟಣ ಮತ್ತು ದಾವಣಗೆರೆಯಲ್ಲಿ ಯಲ್ಲಿ ಖರೀದಿಸಬಹುದಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT