ರಾಜ್ಯ

ಗೌರಿ ಲಂಕೇಶ್ ಹತ್ಯೆ ಪ್ರಕರಣ; 13ನೇ ಆರೋಪಿ ಪೊಲೀಸರ ವಶಕ್ಕೆ

Manjula VN
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ 13ನೇ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ವಿಶೇಷ ತನಿಖಾ ದಳದ ವಶಕ್ಕೆ ಒಪ್ಪಿಸಿದೆ. 
ಭರತ್ ಕುರ್ಣೆ ಅಲಿಯಾತ್ ತಮಾತರ್ (37) ಬಂಧಿತ ಆರೋಪಿಯಾಗಿದ್ದಾನೆ. ಈತ ಬೆಳಗಾವಿ ಜಿಲ್ಲೆಯ ಬಂಭಾಜಿ ಗಲ್ಲಿ ನಿವಾಸಿಯಾಗಿದ್ದು, ತರಕಾರಿ ವ್ಯಾಪಾರಿ ಹಾಗೂ ಹೋಟೆಲ್ ನಡೆಸುತ್ತಿದ್ದ. ಆಗಸ್ಟ್ 9 ರಂದು ಪೊಲೀಸರು ಈತನನ್ನು ಬಂಧನಕ್ಕೊಳಪಡಿಸಿದ್ದರು. 
ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವವರ ಪೈಕಿ ಈತ 12ನೇ ವ್ಯಕ್ತಿಯಾಗಿದ್ದು, 13ನೇ ಆರೋಪಿಯಾಗಿದ್ದಾನೆ. ಗೌರಿ ಮತ್ತು ಕಲಬುರಗಿ ಹಂತಕರು ಈತನ ತೋಟದಲ್ಲಿಯೇ ಬಂದೂಕು ತರಬೇಕಿ ಪಡೆದಿದ್ದರು ಎಂಬ ಆರೋಪದ ಮೇಲೆ ಅಧಿಕಾರಿಗಳು ಈತನನ್ನು ಬಂಧನಕ್ಕೊಳಪಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿಯನ್ನು ಎಸ್ಐಟಿ ವಶಕ್ಕೆ ನೀಡಿದೆ. 
ಕುರ್ಣೆ ಪರ ವಕೀಲರು ತಮ್ಮ ಕಕ್ಷಿದಾರನನ್ನು ಪೊಲೀಸರ ವಶಕ್ಕೆ ಒಪ್ಪಿಸಬಾರದು ಎಂದು ವಾದ ಮಂಡಿಸಿದ್ದರು. ಇದರಂತೆ ನಿನ್ನೆ ವಿಚಾರಣೆ ನಡೆಸಿದ ನ್ಯಾಯಾಲಯದ ಕುರ್ಣೆ ಪರವಕೀಲರ ವಾದ ತಿರಸ್ಕರಿಸಿ ತೀರ್ಪವನ್ನು ಸೋಮವಾರಕ್ಕೆ ಕಾಯ್ದಿರಿಸಿತು. ಆ.20ರವರೆಗೆ ಆರೋಪಿಯನ್ನು ಎಸ್ಐಟಿ ವಶಕ್ಕೆ ಒಪ್ಪಿಸಿತು. 
ಪ್ರಸ್ತುತ ಕುರ್ಣೆ ನಗರದ ಕೇಂದ್ರೀಯ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿದ್ದು, ವಿಶೇಷ ತನಿಖಾ ದಳ ವಿಚಾರಣೆಗೊಳಪಡಿಸಿದೆ. 
SCROLL FOR NEXT