ಉಚಿತ ಚಿಕಿತ್ಸೆ: ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ವೈದ್ಯನ ಕ್ಲಿನಿಕ್'ಗೆ ರಾಜ್ಯಪಾಲ ವಜುಭಾಯ್ ವಾಲಾ ಭೇಟಿ! 
ರಾಜ್ಯ

ಉಚಿತ ಚಿಕಿತ್ಸೆ: ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ವೈದ್ಯನ ಕ್ಲಿನಿಕ್'ಗೆ ರಾಜ್ಯಪಾಲ ವಜುಭಾಯ್ ವಾಲಾ ಭೇಟಿ!

ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಡಾ.ರಮಣರಾವ್ ಅವರ ಕ್ಲಿನಿಕ್'ಗೆ ರಾಜ್ಯಪಾಲ ಡಾ.ವಜುಭಾಯ್ ವಾಯಾ ಅವರು ಭಾನುವಾರ ಭೇಟಿ ನೀಡಿ, ಅಭಿನಂದನೆಗಳನ್ನು ಸಲ್ಲಿಸಿದರು...

ಬೆಂಗಳೂರು: ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಡಾ.ರಮಣರಾವ್ ಅವರ ಕ್ಲಿನಿಕ್'ಗೆ ರಾಜ್ಯಪಾಲ ಡಾ.ವಜುಭಾಯ್ ವಾಯಾ ಅವರು ಭಾನುವಾರ ಭೇಟಿ ನೀಡಿ, ಅಭಿನಂದನೆಗಳನ್ನು ಸಲ್ಲಿಸಿದರು. 
ಟಿ.ಬೇಗೂರಿನಲ್ಲಿ ಡಾ.ರಮಣ್ ರಾವ್ ಅವರು, ಹೃದ್ರೋಗ ತಜ್ಞ ಹಾಗೂ ಸಾಮಾನ್ಯ ವೈದ್ಯರಾಗಿದ್ದು,  ಗ್ರಾಮೀಣ ಪ್ರದೇಶದ ಜನರಿಗೆ 45 ವರ್ಷಗಳಿಂದ ವಾರಾಂತ್ಯದ ದಿನವಾದ ಭಾನುವಾರದಂದು ಉಚಿತ ಚಿಕಿತ್ಸೆಗಳನ್ನು ನೀಡುತ್ತಾ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 
ವೈದ್ಯನ ಈ ಸಾಮಾಜಿಕ ಸೇವೆ ಕುರಿತು ಸಿಇ ವರದಿ ಮಾಡಿತ್ತು. ಈ ವರದಿ ಕುರಿತಂತೆ ಮಾಹಿತಿ ತಿಳಿದ ವಜುಭಾಯ್ ವಾಲಾ ಅವರು ವೈದ್ಯನ ಕ್ಲಿನಿಕ್'ಗೆ ಭಾನುವಾರ ಭೇಟಿ ನೀಡಿ, ಅಭಿನಂದನೆಗಳನ್ನು ಸಲ್ಲಿಸಿದರು. ರಮಣ್ ಅವರ ಕ್ಲಿನಿಕ್'ಗೆ ಭೇಟಿ ನೀಡಿದ ರಾಜ್ಯಪಾಲರು ಕೆಲ ಗಂಟೆಗಳ ಕಾಲ ಸಮಯವನ್ನು ಕಳೆದರು. 
ವೈದ್ಯಕೀಯ ಕ್ಷೇತ್ರದಲ್ಲಿ ರಮಣ್ ಅವರ ಸೇವೆ ಇದರರಿಗೆ ಮಾದರಿಯಾಗಿದೆ. ಇವರ ಉಚಿತ ವೈದ್ಯಕೀಯ ಸೇವೆ ಮತ್ತಷ್ಟು ಜನರಿಗೆ ತಲುಪಲಿ ಎಂದು ಆಶಿಸುತ್ತೇವೆಂದು ವಜುಭಾಯ್ ವಾಲಾ ಅವರು ಹೇಳಿದ್ದಾರೆ. 
ರಾಜ್ಯಪಾಲರ ಭೇಟಿ ಹಾಗೂ ಅಭಿನಂದನೆಗಳು ಬಹಳ ಸಂತಸವನ್ನು ತಂದಿದೆ. ಕ್ಲಿನಿಕ್ ನಲ್ಲಿ ಕೆಲ ಸಮಯದವರೆಗೂ ಕಾಲ ಕಳೆದ ವಜುಭಾಯ್ ವಾಲಾ ಅವರು, ಹಿರಿಯ ನಾಗರೀಕರಿಗೆ ನಾವು ತಂದಿದ್ದ ವಾಕಿಂಗ್ ಸ್ಟಿಕ್ಸ್'ಗಳನ್ನು ವಿತರಿಸಿದರು ಎಂದು ಡಾ.ರಮಣ ಅವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?