ರಾಜ್ಯ

ವಿಶ್ವೇಶ್ವರಯ್ಯ ತಾಂತ್ರಿಕ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಡ್ಡಾಯ

Sumana Upadhyaya

ಬೆಂಗಳೂರು: ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸುವ ಉದ್ದೇಶದಿಂದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ ವಿದ್ಯಾರ್ಥಿಗಳನ್ನು ಎರಡು ವಿಭಾಗಗಳನ್ನಾಗಿ ಮಾಡಿದೆ. ಹತ್ತನೇ ತರಗತಿಯವರೆಗೆ ಕನ್ನಡ ಭಾಷೆ ಕಲಿತವರು ಅಥವಾ ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಪರೀಕ್ಷೆ ತೇರ್ಗಡೆ ಮಾಡಿಕೊಂಡವರು ಕನ್ನಡ ಮನಸು ವಿಭಾಗದಲ್ಲಿ  ಮತ್ತು ಕನ್ನಡ ಭಾಷೆ ಓದಲು, ಬರೆಯಲು ಅಥವಾ ಮಾತನಾಡಲು ಬಾರದವರು ಕನ್ನಡ ಕಲಿ ಭಾಗದಲ್ಲಿ ಇರುತ್ತಾರೆ.

ಕನ್ನಡ ಬೋಧನೆ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೆ ತರುವ ಸಂಬಂಧ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಅಧಿಕೃತ ಸುತ್ತೋಲೆಯನ್ನು ಹೊರಡಿಸಿದೆ. ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅನುಸರಿಸುವಂತೆ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.

ಈಗಾಗಲೇ ಕನ್ನಡ ಭಾಷೆ ತಿಳಿದಿರುವರಿಗೆ ಕಲಿಸುವ ಅಗತ್ಯವಿಲ್ಲ, ಹಾಗಾಗಿ ನಾವು ವಿಭಾಗ ಮಾಡಿದ್ದೇವೆ ಎಂದು ವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ ಜಗನ್ನಾಥ್ ರೆಡ್ಡಿ.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸಿನ ಮೇರೆಗೆ ಕನ್ನಡ ಭಾಷೆಯ ಕಡ್ಡಾಯವನ್ನು ಜಾರಿಗೆ ತರಲಾಗಿದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಮಾನವೀಯ ಮತ್ತು ವಿಜ್ಞಾನ ಮಂಡಳಿ ಸಿಲೆಬಸ್ ತಯಾರಿಸಿದೆ. ಕನ್ನಡ ಭಾಷೆ ಬೋಧಕರನ್ನು ನೇಮಕ ಮಾಡಲು ಸಾಧ್ಯವಾಗದಿರುವುದರಿಂದ ಅತಿಥಿ ಉಪನ್ಯಾಸಕರನ್ನು ನೇಮಿಸಲಿದೆ.

ವಾರದಲ್ಲಿ ಎರಡು ಗಂಟೆಗಳ ಕಾಲ 16 ವಾರಗಳವರೆಗೆ ಕನ್ನಡ ಭಾಷೆ ಕಲಿಸುವ ತರಗತಿ ನಡೆಸಲಾಗುತ್ತದೆ ಎಂದು ರಿಜಿಸ್ಟ್ರಾರ್ ತಿಳಿಸಿದ್ದಾರೆ.

SCROLL FOR NEXT