ಹಾಸನ: ಭಾರಿ ಮಳೆಯಿಂದಾಗಿ ಉಂಟಾದ ಭೂಕುಸಿತದ ಕಾರಣ ಆಗಸ್ಟ್ 14 ರಿಂದ ಯಡಕುಮರಿ ರೈಲ್ವೆ ನಿಲ್ದಾಣದ್ಲ್ಲಿ ಸಿಕ್ಕಿ ಹಾಕಿಕೊಂಡಿದ್ದ ದ್ದ 16 ರೈಲ್ವೆ ಸಿಬ್ಬಂದಿಗಳನ್ನು ಸಕಲೇಶಪುರ ಸಹಾಯಕ ಕಮೀಷನರ್ ಲಕ್ಷ್ಮೀಕಾಂತ ರೆಡ್ಡಿ ಮತ್ತು ತಹಶೀಲ್ದಾರ್ ಗಿರೀಶ್ ನಂದನ್ ನೇಸಕಲೇಶಪುರದ ತೃತ್ವದ ತಂಡ ಅಪಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ವೈದ್ಯರೊಂದಿಗೆ ಪೊಲೀಸ್ ಹಾಗೂ ರೆವಿನ್ಯೂ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ತೆರಳಿದ್ದಲ್ಲದೆ ಎಲ್ಲಾ ಸಿಬ್ಬಂದಿಗಳನ್ನು ಸಕಲೇಶಪುರ ಪಟ್ಟಣಕ್ಕೆ ಸುರಕ್ಷಿತವಾಗಿ ಕರೆತಂದಿದ್ದಾರೆ.
ರೈಲ್ವೆ ವಿಭಾಗದ ವ್ಯವಸ್ಥಾಪಕರು, ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ರೈಲ್ವೆ ಸಿಬ್ಬಂದಿಗಳ ರಕ್ಷಣೆಗೆ ನೆರವಾಗುವಂತೆ ಗುರುವಾರ ಮನವಿ ಮಾಡಿದ್ದರು.
ಸಕಲೇಶಪುರ ಎಸಿ ನೇತೃತ್ವದ ತಂಡ ಟ್ರೆಕ್ಕಿಂಗ್ ಪರಿಣಿತರೊಂದಿಗೆ ನಡೆದುಕೊಂಡೇ ಯಡಕುಮರಿಯನ್ನು ತಲುಪಿದ್ದು ಕೆಟ್ಟ ವಾಯುಗುಣ, ಭಾರೀ ಮಳೆ, ಗಾಳಿಯ ಕಾರಣ ವಾಯುದಳ ಅಧಿಕಾರಿಗಳು ರಕ್ಷಣಾ ತಂಡಕ್ಕೆ ವಿಮಾನದ ಸಹಾಯ ಒದಗಿಸಲು ನಿರಾಕರಿಸಿಇದ್ದರು.
ಭೂಕುಸಿತದ ನಂತರ ರೈಲ್ವೆ ಪ್ರಾಧಿಕಾರವು ಯಶ್ವವಂತಪುರ ಮತ್ತು ಕಾರವಾರ ನಡುವೆ ಸುಬ್ರಹ್ಮಣ್ಯ ಮತ್ತು ಮಂಗಳೂರಿನ ಮಾರ್ಗದಲ್ಲಿ ರೈಲು ಸಂಚಾರವನ್ನು ರದ್ದುಪಡಿಸಿದೆ.
ಜೀವ ಉಳಿಯತ್ತೆ ಎನ್ನುವ ಯಾವ ಕಲ್ಪನೆಯೂ ಇರಲಿಲ್ಲ!
"ನಮ್ಮ ಜೀವ ಉಳಿಯತ್ತೆ ಎನ್ನುವ ಯಾವ ಕಲ್ಪನೆಯೂ ಇರಲಿಲ್ಲ, ಪೋಲೀಸರು, ಅಧಿಕಾರಿಗಳ ತಂಡ ಬಂದು ನಮ್ಮ ಜೀವ ಉಳಿಸಿದ್ದಾರೆ" ರೈಲು ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಯಡಕುಮರಿ ನಿಲ್ದಾಣದ ಸ್ಟೇಷನ್ ಮಾಸ್ಟರ್ ಹೇಳುತ್ತಾರೆ.
"ಮಳೆ ನೀರನ್ನೇ ಕುಡಿಯಬೇಕಾಗಿತ್ತು, ದಿನಸಿಯೂ ಖಾಲಿಯಾಗಿದ್ದ ಕಾರಣ ಏನೂ ಮಾಡುವಂತಿರಲಿಲ್ಲ, ಸ್ಟೇಷನ್ ಎದುರಿಗೆ ಗುಡ್ಡ ಕುಸಿದಾಗ ನಾವೆಲ್ಲಾ ಇಲ್ಲೇ ಸಾಯುವೆವು ಎಂದೆಣಿಸಿದ್ದೆವು" ಅವರು ತಮ್ಮ ಅನುಭವವನ್ನು ತೋಡಿಕೊಂಡಿದ್ದಾರೆ.
ಅಪಾಯದಲ್ಲಿ ಸಿಲುಕಿದ್ದವರೆಲ್ಲರ ಆರೋಗ್ಯ ಉತ್ತಮವಾಗಿದೆ, ಎಲ್ಲರೂ ಸುರಕ್ಷಿತವಿದ್ದಾರೆ ಎಂದು ಸಕಲೇಶಪುರ ಉಪವಿಭಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಹೇಳಿದರು.