ರಾಜ್ಯ

ಕೆ-ಶಿಪ್‌ ಸ್ಥಳಾಂತರ ನಂತರ ಮತ್ತೊಂದು ಯೋಜನೆ ಬೆಳಗಾವಿಯಿಂದ ಔಟ್!

Shilpa D
ಬೆಳಗಾವಿ: ಬೆಳಗಾವಿಯಿಂದ ಕೆ-ಶಿಪ್‌ ವಿಭಾಗೀಯ ಕಚೇರಿಯನ್ನು ಹಾಸನಕ್ಕೆ  ಸ್ಥಳಾಂತರಿಸಿದ ವಿವಾದ ಇನ್ನೂ ಹಸಿ ಇರುವಾಗಲೇ ಬೆಳಗಾವಿಯಲ್ಲಿ ಉದ್ದೇಶಿತ ಸುಮಾರು 150 ಎಕರೆ ಪ್ರದೇಶದ "ಆಯುಷ್‌ ಔಷಧ ತಯಾರಿಕಾ ಘಟಕ' ನಿರ್ಮಾಣ ಯೋಜನೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ.
ಬೆಳಗಾವಿಯಲ್ಲಿರುವ ಸುವರ್ಣಸೌಧಕ್ಕೆ ಮತ್ತಷ್ಟು ಬಲ ತುಂಬುವ ಬದಲು, ಸಿಎಂ ಕುಮಾರ ಸ್ವಾಮಿ ಅದಕ್ಕೆ ವಿರೋಧವಾದ ಕೆಲಸ ಮಾಡುತ್ತಿದ್ದಾರೆ. ಸುವರ್ಣ ಸೌಧ ನಿರ್ಮಾಣವಾದ ಮೇಲೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತು ಬಿಜೆಪಿ ಸರ್ಕಾರಗಳು ಅಧಿಕಾರ ನಡೆಸಿವೆ, 400 ಎಕರೆ ಜಮೀನಿನಲ್ಲಿ ನಿರ್ಮಾಣವಾಗಿರುವ ಸುವರ್ಣ ಸೌಧವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು  ಸರ್ಕಾರ ವಿಫಲವಾಗಿದೆ ಎಂದು ಸ್ಥಳೀಯ ಮುಖಂಡ ಶಿವನಗೌಡ ಪಾಟೀಲ್ ಹೇಳಿದ್ದಾರೆ.
ಸರ್ಕಾರ ಉತ್ತರ ಕರ್ನಾಟಕಕ್ಕೆ ಮತ್ತಷ್ಟು ಅನ್ಯಾಯ ಮಾಡುವ ನಿರ್ಧಾರಗಳನ್ನು ಮುಂದುವರಿಸುತ್ತಿದೆ ಎಂದು ಶಾಸಕ ಅಭಯ್ ಪಾಟೀಲ್ ಆರೋಪಿಸಿದ್ದಾರೆ.
SCROLL FOR NEXT