ರಾಜ್ಯ

ಕರ್ನಾಟಕದ ಮಹದಾಯಿ ಯೋಜನೆ ಸ್ಥಗಿತಗೊಳಿಸಲು ಗೋವಾ ಸರ್ಕಾರ ಚಿಂತನೆ ?

Nagaraja AB

ಬೆಳಗಾವಿ:ಮಹದಾಯಿ ನೀರು ವಿವಾದ ನ್ಯಾಯಾಧೀಕರಣ ಕರ್ನಾಟಕಕ್ಕೆ 13. 5 ಟಿಎಂಸಿ ಮಹದಾಯಿ ನದಿ ನೀರು ಹಂಚಿಕೆ ಮಾಡಿದ ಬೆನ್ನಲ್ಲೇ,  ಕರ್ನಾಟಕದ ಮಹದಾಯಿ ಯೋಜನೆ ಅನುಷ್ಠಾನ ತಡೆಯಲು ಪರಿಣಾಮಕಾರಿ ಪರ್ಯಾಯ ಮಾರ್ಗಗಳನ್ನು ಗೋವಾ ಸರ್ಕಾರ ಹುಡುಕುತ್ತಿದೆ.

ಇತ್ತೀಚಿನ ಹೊಸ ಬೆಳವಣಿಗೆಯೊಂದರಲ್ಲಿ ಕಸ್ತೂರಿ ರಂಗನ್ ವರದಿ ಅಧ್ಯಯನ ನಡೆಸಿದ್ದು, ಕರ್ನಾಟಕ ಸರ್ಕಾರದ  ಮಹದಾಯಿ ನದಿಯ ಜಲವಿದ್ಯುತ್ ಯೋಜನೆಗೆ ಮುಂದುವರಿಯದಂತೆ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಸ್ತುತ ಕರಾವಳಿ ರಾಜ್ಯದಲ್ಲಿ ಯಾವುದೇ ಪರ್ಯಾಯ ಮಾರ್ಗಗಳಿಲ್ಲ. ಕರ್ನಾಟಕ ಸರ್ಕಾರದ  ಜಲವಿದ್ಯುತ್ ಯೋಜನೆಯಿಂದ ಪಶ್ಚಿಮ ಘಟ್ಟದಲ್ಲಿನ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ  ಉಂಟಾಗಲಿದ್ದು, ಗೋವಾ ಮೇಲೂ ಪ್ರಭಾವ ಬೀರಲಿದೆ ಎಂದು ಗೋವಾ ಹೆಚ್ಚುವರಿ ಸಾಲಿಸಿಟರ್ ಜನರಲ್ ಆತ್ಮರಾಮ್ ನಾಡಕರ್ಣೀ ನೇತೃತ್ವದ ಕಾನೂನು ತಜ್ಞರ ಸಮಿತಿ ಆಕ್ಷೇಪಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
SCROLL FOR NEXT