ಮೃತ ದುರ್ದೈವಿಗಳು 
ರಾಜ್ಯ

ವಿಧಿಯಾಟ: ಬೆಂಗಳೂರಿಂದ ಕೊಡಗಿಗೆ ಹೋದ ಮಾರನೇ ದಿನವೇ ಭೂಕುಸಿತದಲ್ಲಿ ಕುಟುಂಬ ಸಮೇತ ಮಣ್ಣಾದ ವಿದ್ಯಾರ್ಥಿನಿ!

ಮಹಾಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ಕೊಡಗು ಅಕ್ಷರಶಃ ನಲುಗಿ ಹೋಗಿದೆ. ಇನ್ನು ಹಲವು ಗ್ರಾಮಗಳೇ ನಾಮವಶೇಷವಿಲ್ಲದಂತೆ ಕಣ್ಮರೆಯಾಗಿದ್ದು ಹಲವರು ಮೃತಪಟ್ಟಿದ್ದಾರೆ...

ಮಡಿಕೇರಿ: ಮಹಾಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ಕೊಡಗು ಅಕ್ಷರಶಃ ನಲುಗಿ ಹೋಗಿದೆ. ಇನ್ನು ಹಲವು ಗ್ರಾಮಗಳೇ ನಾಮವಶೇಷವಿಲ್ಲದಂತೆ ಕಣ್ಮರೆಯಾಗಿದ್ದು ಹಲವರು ಮೃತಪಟ್ಟಿದ್ದಾರೆ. 
ಮೂಲತಃ ಕೊಡಗಿನವರಾದ ಮೋನಿಷಾ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕಾಲೇಜಿನಲ್ಲಿ ಬಿಸಿಎ ಪದವಿ ಪಡೆದಿದ್ದು, ಮೈಸೂರಿನ ಎಂಸಿಎ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಳು. ಬೆಂಗಳೂರಿನಲ್ಲಿ ಪಿಜಿಯೊಂದರಲ್ಲಿ ತಂಗಿದ್ದ ಮೋನಿಷಾ ಇಂಟನ್‌ಶಿಪ್ ಮುಗಿಸಿ ಇತ್ತೀಚೆಗಷ್ಟೇ ಸಂಬಂಧಿಕರೊಬ್ಬರ ಮದುವೆ ನಿಮಿತ ಆಕೆ ಬೆಂಗಳೂರಿನಿಂದ ಮಡಿಕೇರಿಗೆ ಹೋಗಿದ್ದಳು. 
ಮೋನಿಷಾ ಮನೆ ಸೇರಿದ ಮಾರನೇ ದಿನ ಭೂಕುಸಿತ ಸಂಭವಿಸಿದ್ದು ಇದರಲ್ಲಿ ಪೋಷಕರ ಸಮೇತ ಮೋನಿಷಾ ಕಣ್ಮರೆಯಾಗಿದ್ದರು. 
ಭೂಕುಸಿತದಲ್ಲಿ ನಾಲ್ವರು ನಾಪತ್ತೆಯಾಗಿದ್ದರು. ಇವರ ಪೈಕಿ ಮೂವರ ಮೃತದೇಹ ಪತ್ತೆಯಾಗಿದೆ. ಅವರನ್ನು ಮೋನಿಷಾ, ತಂದೆ ಬಸಪ್ಪ ಮತ್ತು ತಾಯಿ ಗೌರಮ್ಮ ಎಂದು ಗುರುತಿಸಲಾಗಿದೆ.
ಬಸಪ್ಪ ಸಂಬಂಧಿಕರು ಮೂವರ ಮೃತದೇಹಕ್ಕೂ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್