ರಾಜ್ಯ

ರೈತರ ಸಾಲಮನ್ನಾ; ನಾಲ್ಕು ಕಂತುಗಳ ರೂಪದಲ್ಲಿ ಸಾಲ ಮರುಪಾವತಿಗೆ ಬ್ಯಾಂಕುಗಳು ನಕಾರ?

Sumana Upadhyaya

ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ರೈತರ ಸಾಲಮನ್ನಾ ತೀವ್ರ ಸಮಸ್ಯೆಯಾಗಿ ಕಾಡುತ್ತಿದೆ. ಇದೀಗ ಬ್ಯಾಂಕು ಗಳು ಹಣವನ್ನು ನಾಲ್ಕು ಕಂತುಗಳಲ್ಲಿ ಸ್ವೀಕರಿಸಲು ನಿರಾಕರಿಸುತ್ತಿವೆ. ಸಂಪೂರ್ಣವಾಗಿ ಒಂದೇ ಬಾರಿಗೆ ಸಾಲಮನ್ನಾ ಹಣವನ್ನು ಮರುಪಾವತಿ ಮಾಡುವಂತೆ ಬ್ಯಾಂಕುಗಳು ಸರ್ಕಾರವನ್ನು ಒತ್ತಾಯಿಸುತ್ತಿದ್ದು ಈ ಸಂಬಂಧ ಇಂದು ನಡೆಯುವ ಸಚಿವ ಸಂಪುಟದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.

ಮುಂದಿನ ಬಜೆಟ್ ಒಳಗೆ ಸುಮಾರು 23 ಸಾವಿರ ಕೋಟಿ ರೂಪಾಯಿಗಳ ಸಾಲಮನ್ನಾ ಮಾಡಲು ಕುಮಾರಸ್ವಾಮಿ ನೇತೃತ್ವದ ಸರ್ಕಾರ ತೀರ್ಮಾನಿಸಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಕಂತುಗಳ ರೂಪದಲ್ಲಿ ಹಣವನ್ನು ಮರುಪಾವತಿ ಪಡೆಯಲು ಆರಂಭದಲ್ಲಿ ತೋರಿಸಿದ್ದ ಬೆಂಬಲವನ್ನು ರಾಷ್ಟ್ರೀಕೃತ ಬ್ಯಾಂಕುಗಳು ಈಗ ತೋರಿಸುತ್ತಿಲ್ಲ, ಆರಂಭದಲ್ಲಿ ರೈತರ ಸಾಲಗಳ ಮೇಲೆ ಬಡ್ಡಿಗೆ ವಿನಾಯ್ತಿ ನೀಡಲು ನಿರ್ಧರಿಸಿದ್ದ ಬ್ಯಾಂಕುಗಳು ಇದೀಗ ನಿರಾಕರಿಸುತ್ತಿವೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕು ಅಧಿಕಾರಿಗಳು ಬಡ್ಡಿಯನ್ನು ತೆಗೆದುಹಾಕಲು ಮತ್ತು ಕಂತುಗಳ ರೂಪದಲ್ಲಿ ಮರುಪಾವತಿಗೆ ನಿರಾಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಿಂದ ಕುಮಾರಸ್ವಾಮಿ ಸರ್ಕಾರಕ್ಕೆ ಹೊಸ ಸವಾಲು ಎದುರಾಗಿದೆ.

ಬ್ಯಾಂಕುಗಳು ಕಂತುಗಳ ರೂಪದಲ್ಲಿ ರೈತರ ಸಾಲ ಮರುಪಾವತಿಯನ್ನು ಸ್ವೀಕರಿಸಲು ನಿರಾಕರಿಸುತ್ತಿದೆ. ಈ ಬಗ್ಗೆ ಯಾರನ್ನೂ ಟೀಕಿಸಲು ನಾನು ಸಿದ್ದನಿಲ್ಲ. ಯಾರಾದರೂ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದ್ದರೆ ನಾನು ಅದಕ್ಕೆ ಏನೂ ಹೇಳುವುದಿಲ್ಲ. ರಾಜಕೀಯದಲ್ಲಿ ಇದೆಲ್ಲಾ ಸಾಮಾನ್ಯ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

SCROLL FOR NEXT