ರಾಜ್ಯ

ಕೊಡಗು: ವಿಕೋಪಕ್ಕೆ ಸಿಲುಕಿ ನಿಂತುಹೋಗಿದ್ದ ಮದುವೆ, ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಸುಖಾಂತ್ಯದತ್ತ!

Shilpa D
ಮಡಿಕೇರಿ: ಎಲ್ಲವೂ ಸರಿ ಇದ್ದಿದ್ದರೆ ನಾಳೆ ಅಂದರೆ ಆಗಸ್ಟ್ 26 ರಂದು ಆ ಜೋಡಿ ಅದ್ಧೂರಿಯಾಗಿ ಬಂಧು ಮಿತ್ರರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು, ಆದರೆ ನಡೆದದ್ದೇ ಬೇರೆ.
ಆಗಸ್ಟ್ 26 ರಂದು ಮಕ್ಕಂದೂರಿನ ಮಂಜುಳಾ ಮತ್ತು ರಾಜೇಶ್ ಅವರ ವಿವಾಹ ನಡೆಯಬೇಕಿತ್ತು. ಕೊಡಗಿನಲ್ಲಿ ಉಂಟಾದ ಪ್ರವಾಹ, ಭೂ ಕುಸಿತದಿಂದಾಗಿ ಮದುವೆ ಯೋಜನೆಯನ್ನು ರದ್ದು ಪಡಿಸಲಾಗಿತ್ತು. ಆದರೆ ಈಗ ಮತ್ತೆ ಮದುವೆಯ ಕನಸು ನನಸಾಗುವತ್ತ ಸಾಗುತ್ತಿದೆ.
ಮಂಜುಳ ವಿವಾಹವನ್ನು ಅದ್ಧೂರಿಯಾಗಿ ಮಾಡಬೇಕೆಂದು ಅವರ ಸಹೋದರರು ನಿರ್ದರಿಸಿದ್ದರು, ಅದಕ್ಕಾಗಿ ಎಲ್ಲಾ ಸಿದ್ಧತೆ ಕೂಡ ನಡೆದಿತ್ತು. ಆದರೆ ಪ್ರವಾಹ ಎಲ್ಲವನ್ನು ಕಸಿದುಕೊಂಡಿತ್ತು, ಅವರ ಮನೆಯಲ್ಲಿ ಅವರಿಗೆ ಸೇರಿದ ಎಲ್ಲಾ ವಸ್ತುಗಳು ಕಳೆದು ಹೋಗಿದ್ದವು. ಅವರೆಲ್ಲಾ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಮದುವೆ ರದ್ದುಗೊಳಿಸಬೇಕೆಂದು ಕುಟುಂಬಸ್ಥರು ನಿರ್ಧರಿಸಿದ್ದರು. 
ಮಡಿಕೇರಿಯ ಲಯನ್ಸ್ ಕ್ಲಬ್ ಮತ್ತು ಸೇವಾ ಭಾರತಿ ಸಂಘಟನೆಗಳು ಈ ಮಗುವೆ ನಡೆಸಿಕೊಳ್ಳಲು ಮುಂದೆ ಬಂದಿವೆ.
ನನ್ನ ಹಿರಿಯ ಅಣ್ಣ ಅದ್ಧೂರಿ ಮದುವೆಯ ಕನಸು ಕಂಡಿದ್ದ, ಆಮಂತ್ರಣ ಪತ್ರಿಕೆ ಕೂಡ ಪ್ರಿಂಟ್ ಆಗಿತ್ತು, ನಾವು ಎಲ್ಲಾ ಭರವಸೆಗಳನ್ನು ಕಳೆದು ಕೊಂಡಿದ್ದೆವು, ಮೀಡಿಯಾ ನಮ್ಮ ಸಹಾಯಕ್ಕೆ ಬಂದಾಗ ನಮ್ಮ ಕಥೆ ಬೆಳಕಿಗೆ ಬಂತು, ಎಲ್ಲರೂ ನಮಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ ಎಂದು ಮಂಜುಳಾ ಹೇಳಿದ್ದಾರೆ, 
SCROLL FOR NEXT