ಸಂಗ್ರಹ ಚಿತ್ರ 
ರಾಜ್ಯ

ನಗರದ ಹಲವೆಡೆ ಮಳೆಯ ಆರ್ಭಟ: ನಗರದ ಜನ ಜೀವನ ಅಸ್ತವ್ಯಸ್ತ

ರಾಜಧಾನಿಯ ಹಲವೆಡೆ ಭಾನುವಾರ ಸುರಿದ ಮಳೆ ಸಾರ್ವಜನಿಕರ ವಾರಾಂತ್ಯದ ಮೋಜು-ಮಸ್ತಿಗೆ ಅಡ್ಡಿಯುಂಟಾಗುವಂತೆ ಮಾಡಿತ್ತು...

ಬೆಂಗಳೂರು: ರಾಜಧಾನಿಯ ಹಲವೆಡೆ ಭಾನುವಾರ ಸುರಿದ ಮಳೆ ಸಾರ್ವಜನಿಕರ ವಾರಾಂತ್ಯದ ಮೋಜು-ಮಸ್ತಿಗೆ ಅಡ್ಡಿಯುಂಟಾಗುವಂತೆ ಮಾಡಿತ್ತು. 
ಮೆಜೆಸ್ಟಿಕ್, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಮೈಸೂರು ರಸ್ತೆ, ಕೆಂಗೇರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಭಾರೀ ಮಳೆಯಾದ್ದರಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ ಸವಾರರು ಪರದಾಡುವಂತಾಗಿತ್ತು. 
ನಿನ್ನೆ ಮಧ್ಯಾಹ್ನದಿಂದ ಮೋಡ ಮುಸುಕಿದ ವಾತಾವರಣ ಇತ್ತಾದರೂ ಸಂಜೆ ವೇಳೆಗೆ ನಗರದ ಹಲವೆಡೆ ಮಳೆಯಾಯಿತು. ಇದರಿಂದ ರಜೆಯ ಮಜಾ ಅನುಭವಿಸಲು ಹೊರ ಬಂದಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು. 
ಮೈಸೂರು ರಸ್ತೆಯ ಮೇಲ್ಸೇತುವೆಯಲ್ಲಿ ನೀರು ಸಂಗ್ರಹವಾಗಿ ವಾಹನ ಸಂಚಾರ ಕೆಲ ಕಾಲ ಅಸ್ತವ್ಯಸ್ತವಾಯಿತು. ರಸ್ತೆ ಮಾರ್ಗ ಮಧ್ಯೆ ಮಳೆಗೆ ಸಿಲುಕಿದವರು ವಾಹನಗಳನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸಿ ಮರ ಹಾಗೂ ಕಟ್ಟಡ, ಬಸ್ ನಿಲ್ದಾಣಗಳ ಆಶ್ರಯ ಪಡೆದರು. 
ಕಾಡುಗೋಡಿಯಲ್ಲಿ 27.5 ಮಿಮೀ, ಬೆಂಗಳೂರು ಉತ್ತರ ಭಾಗದಲ್ಲಿ 13 ಮಿಮೀ, ಅತ್ತೂರು ಲೇಜೌಟ್ 11 ಮಿಮೀ, ವಿದ್ಯಾರಣ್ಯಪುರ 8 ಮಿಮೀ, ಬ್ಯಾಟರಾಯನಪುರ 10ಮಿಮೀ, ಯಶವಂತಪುರ 7.5 ಮಿಮೀ, ಆರ್'ಆರ್ ನಗರ 7.5 ಮಿಮೀ, ನಾಗರಬಾವಿ 10.5 ಮಿಮೀ, ಅಗ್ರಹಾರ ದಾಸರಹಳ್ಳಿ 8 ಮಿಮೀ, ಕೆಂಗೇರಿ 25.5 ಮಿಮೀ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್