ರಾಜ್ಯ

ಮುಖ್ಯಮಂತ್ರಿಗಳ ಮಾನವೀಯ ಮುಖ: ಬೀದಿಯಲ್ಲಿ ಹೂ ಮಾರುವ ಹುಡುಗಿಯ ಕಷ್ಟಕ್ಕೆ ಸ್ಪಂದಿಸಿದ ಸಿಎಂ!

Raghavendra Adiga
ಮಂಡ್ಯ: ಬೀದಿಯಲ್ಲಿ ಹೂ ಮಾರಾಟ ಮಾಡುತ್ತಿದ್ದ ಬಾಲಕಿಯೊಬ್ಬಳ ಸಂಕಶ್ಃಟಕ್ಕೆ ಸ್ಪಂದಿಸುವ ಮೂಲಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮಲ್ಲಿನ ಮಾನವೀಯ ಮುಖವನ್ನು ಮತ್ತೆ ಅನಾವರಣಗೊಳಿಸಿದ್ದಾರೆ.
ಬುಧವಾರ ಕೆ.ಆರ್.ಎಸ್ ನಿಂದ ರಾಮನಗರಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿ ಮಾರ್ಗದ ನಡುವೆ ಶ್ರೀರಂಗಪಟ್ಟಣ ರಸ್ತೆ ಬೆಳಗೊಳದಲ್ಲಿ ರಸ್ತೆ ಬದಿ ಹೂ ವ್ಯಾಪಾರ ಮಾಡುತ್ತಿದ್ದ ಪುಟ್ಟ ಬಾಲಕಿಯನ್ನು ಗಮನಿಸಿದ್ದಾರೆ. ತಕ್ಷಣ ಕಾರ್ ನಿಲ್ಲಿಸಿದ ಕುಮಾರಸ್ವಾಮಿ ಬಾಲಕಿಯನ್ನು ಕರೆದು ಅವಳ ಕಷ್ಟವನ್ನು ಆಲಿಸಿದ್ದಾರೆ.
ಬಾಲಕಿ ಶಾಬಾಬ್ತಾಜ್ ತನ್ನ ಕುಟುಂಬದ ಸಂಕಷ್ಟವನ್ನು ಮುಖ್ಯಮಂತ್ರಿಗಳಲ್ಲಿ ಅರಿಕೆ ಮಾಡಿಕೊಂಡಿದ್ದು ಆಕೆಗೆ ಅವಳ ತಂದೆ ತಾಯಿಗಳು ತನ್ನನ್ನು ಭೇಟಿಯಾಗುವಂತೆ ಹೇಳಿದ್ದಾರೆ. ಅಲ್ಲದೆ ಬಾಲಕಿಯ ಶಿಕ್ಷಣಕ್ಕೆ ಸಹ ನೆರವು ನೀಡುವ ಭರವಸೆ ವ್ಯಕ್ತಪ್ಡಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸರಳತೆಯನ್ನು ಕಂಡ ಬೆಳಗೊಳ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಲ್ಲದೆ ಸಿಎಂ ಬಗೆಗೆ ಮೆಚ್ಚುಗೆ ಸೂಚಿಸಿದ್ದಾರೆ.
ಸಿಎಂ ಕುಮಾರಸ್ವಾಮಿ ಇಂದು ತಮ್ಮ ತವರು ಕ್ಷೇತ್ರ ರಾಮನಗರದಲ್ಲಿ ಸಾರ್ವಜನಿಕರ ಕುಂದುಕೊರತೆ ವಿಚಾರಿಸುವ ಕಾರ್ಯಕ್ರಮ ನಿಗದಿಯಾಗಿತ್ತು.
ಇನ್ನು ಮುಖ್ಯಮಂತ್ರಿಗಳು ಹೀಗೆ ಸಹಾಯ ಹಸ್ತ ಚಾಚುತ್ತಿರುವುದು ಇದೇ ಮೊದಲೇನೂ ಅಲ್ಲ ಇದಕ್ಕೆ ಹಿಂದೆ ಬೆಂಗಳೂರು ಜೆಪಿ ನಗರದ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸಹ ಇವರು ಕಿವಿಯಾಗಿದ್ದರು ಎನ್ನುವುದು ನಾವಿಲ್ಲಿ ಸ್ಮರಿಸಬಹುದು.
SCROLL FOR NEXT