ರಾಜ್ಯ

ಸೀರೆಯಲ್ಲಿ ಆಡುತ್ತಿದ್ದ 13 ವರ್ಷದ ಬಾಲಕಿ ಉಸಿರುಗಟ್ಟಿ ಸಾವು!

Srinivas Rao BV
ಸೀರೆಯಲ್ಲು ಆಡುತ್ತಿದ್ದ 13 ವರ್ಷದ ಬಾಲಕಿ, ಸೀರೆ ಸುತ್ತಿಕೊಂಡು ಉಸಿರುಕಟ್ಟಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ನಡೆದಿದೆ. 
ರಾತ್ರಿ ಊಟಕ್ಕೂ ಮುನ್ನ ಆಡುತ್ತಿದ್ದ ಬಾಲಕಿ ಪರ್ವೀನ್ ಭಾನು ಶಾಂತಿನಿಕೇತನ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೇಳಿದ್ದಾರೆ. 
ಸೀರೆ ಹಿಡಿದು ತೂಗುತ್ತಿದ್ದ ಬಾಲಕಿ ಕುತ್ತಿಗೆಗೆ ಸೀರೆ ಬಿಗಿದುಕೊಂಡಿದೆ, ಅದನ್ನು ತಡೆಯಲು ಸಾಧ್ಯವಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.  
SCROLL FOR NEXT