ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಅಶ್ಲೀಲ ಚಿತ್ರದಲ್ಲಿರುವುದು ತನ್ನ ಪತ್ನಿ ಎಂದು ದೂರಿದ ನೀಲಿ ಚಿತ್ರಗಳ ವ್ಯಸನಿ!

ನೀಲಿ ಚಿತ್ರಗಳ ವೀಕ್ಷಣೆಯ ವ್ಯಸನಿಯಾಗಿದ್ದ 37 ವರ್ಷದ ಪತಿ ಮಹಾಶಯನೊಬ್ಬ, ತನ್ನ ಪತ್ನಿಯೂ ಅಶ್ಲೀಲ ಚಿತ್ರವೊಂದರಲ್ಲಿ ನಟಿಸಿದ್ದು, ತಾನು ಕಣ್ಣಾರೆ ನೋಡಿರುವುದಾಗಿ ಆರೋಪಿಸಿದ್ದಾನೆ.

ಬೆಂಗಳೂರು: ನೀಲಿ ಚಿತ್ರಗಳ ವೀಕ್ಷಣೆಯ ವ್ಯಸನಿಯಾಗಿದ್ದ 37 ವರ್ಷದ ಪತಿ ಮಹಾಶಯನೊಬ್ಬ, ತನ್ನ ಪತ್ನಿಯೂ ಅಶ್ಲೀಲ ಚಿತ್ರವೊಂದರಲ್ಲಿ ನಟಿಸಿದ್ದು, ತಾನು ಕಣ್ಣಾರೆ ನೋಡಿರುವುದಾಗಿ ಆರೋಪಿಸಿದ್ದಾನೆ.
ತಾನು ಆನ್ ಲೈನ್ ನಲ್ಲಿ ನೋಡಿದ ಅಶ್ಲೀಲ ವಿಡಿಯೋದೊಂದಿಗೆ ತನ್ನ ಗರ್ಭಿಣಿ ಪತ್ತಿಯನ್ನು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆದುಕೊಂಡು ಬಂದು, ದೂರು ನೀಡಿದ ವಿಚಿತ್ರ ಘಟನೆ ನಡೆದಿದೆ.
ನೀಲಿಗಣ್ಣಿನ ಪತಿಯ ಆರೋಪವನ್ನು ಪರಿಶೀಲಿಸಿದ ಸೈಬರ್ ಅಪರಾಧ ವಿಭಾಗದ ಪೊಲೀಸರು, ನೀನು ನೋಡಿ ನೀಲಿ ದೃಶ್ಯದಲ್ಲಿರುವುದು ನಿನ್ನ ಪತ್ನಿಯಲ್ಲ ಎಂದು ದೃಢಪಡಿಸಿದ್ದಾರೆ. ಆದರೆ ಪೊಲೀಸರ ಮಾತನ್ನು ನಂಬದ ವಿಕೃತ ಮನಸಿನ ಪತಿಗೆ ಮನೋವೈದ್ಯರನ್ನು ಭೇಟಿ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ.
ಆಂಧ್ರ ಪ್ರದೇಶ ಮೂಲದ 31 ವರ್ಷದ ಪತ್ನಿ ಮನೋವೈದ್ಯರನ್ನು ಕಾಣಲು ನಿರಾಕರಿಸಿದ ಪತಿಯನ್ನು ತೊರೆದು ತವರು ಮನಗೆ ಹೋಗಿದ್ದಾಳೆ. 
ಈ ದಂಪತಿಗೆ ಈಗಾಗಲೇ ಒಂದು ಮಗು ಇದ್ದು, ಬೆಂಗಳೂರಿನ ನಿವಾಸಿಯಾಗಿರುವ ಆರೋಪಿ ಪತಿ ವೆಂಕಟೇಶ್ ಇ-ಕಾಮರ್ಸ್ ಪೋರ್ಟಲ್ ವೊಂದರ ಸಾಮಾಗ್ರಿ ವಿತರಕನಾಗಿ ಕೆಲಸ ಮಾಡುತ್ತಿದ್ದಾರೆ.
ವೆಂಕಟೇಶ್ ಆರು ವರ್ಷಗಳ ಹಿಂದೆ ಮದುವೆಯಾಗಿದ್ದು, ನಿರಂತರ ನೀಲಿ ಚಿತ್ರಗಳ ವೀಕ್ಷಣೆಯಿಂದ ತನ್ನ ಪತ್ನಿಯ ಶೀಲ ಶಂಕಿಸುತ್ತಿದ್ದ ಮತ್ತು ಆಶ್ಲೀಲ ಚಿತ್ರವೊಂದರ ದೃಶ್ಯದಲ್ಲಿರುವುದು ತನ್ನ ಪತ್ನಿಯೇ ಎಂದು ಶಂಕಿಸುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತರ ವನಿತಾ ಸಹಾಯವಾಣಿ ಕಚೇರಿ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT