ನೀಲಮ್ಮ ಮೇಟಿ, ಮನೆ 
ರಾಜ್ಯ

ವಿಜಯಪುರ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ ಮನೆ ಕಳ್ಳತನ

ವಿಜಯಪುರ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ ಅವರು ಅತ್ತ ಬೆಂಗಳೂರಿನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇತ್ತ ವಿಜಯಪುರದಲ್ಲಿರುವ ಅವರ ಮನೆಯಲ್ಲಿ ಬುಧವಾರ ಬೆಳಗಿನ ಜಾವ ಕಳ್ಳತನ ನಡೆದಿದೆ.

ವಿಜಯಪುರ: ವಿಜಯಪುರ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ ಅವರು ಅತ್ತ ಬೆಂಗಳೂರಿನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇತ್ತ ವಿಜಯಪುರದಲ್ಲಿರುವ ಅವರ ಮನೆಯಲ್ಲಿ ಬುಧವಾರ ಬೆಳಗಿನ ಜಾವ ಕಳ್ಳತನ ನಡೆದಿದೆ.
ವಿಜಯಪುರದ ಕನಕದಾಸ ಬಡಾವಣೆಯಲ್ಲಿ ಕಳ್ಳತನ ನಡೆದಿದ್ದು, ಕಳ್ಳರು 4 ಲಕ್ಷ ರುಪಾಯಿ ನಗದು, 300 ಗ್ರಾಂ ಚಿನ್ನಾಭರಣ ಮತ್ತು 25 ಲಕ್ಷ ರುಪಾಯಿ ಮೌಲ್ಯದ  ಫಾರ್ಚುನರ್ ಕಾರನ್ನು ಕದ್ದೊಯ್ದಿದ್ದಾರೆ.
ನೀಲಮ್ಮ ಮೇಟಿ ಅವರು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಬೆಂಗಳೂರಿಗೆ ಬಂದಿದ್ದರು. ಇದೇ ಸಮಯವನ್ನು ಬಳಸಿಕೊಂಡ ಕಳ್ಳರು ಅವರ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. 
ನೀಲಮ್ಮ ಮೇಟಿ ಅವರು ಇಂದು ಬೆಳಗ್ಗೆ ವಾಪಸ್ ಮನೆಗೆ​ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ನೀಲಮ್ಮ ಮೇಟಿ ಅವರು, ಮನೆಯಲ್ಲಿ 50 ಲಕ್ಷ ರುಪಾಯಿ ಮೌಲ್ಯದ ವಸ್ತುಗಳಿದ್ದವು. ಪ್ಲಾನ್ ಮಾಡಿ ಕಳ್ಳತನ ಮಾಡಲಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ಭೇದಿಸುವ ಭರವಸೆ ನೀಡಿದ್ದಾರೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಸಂಘರ್ಷ: ಚಿಂತೆ ಬೇಡ.. Hormuz ನಲ್ಲಿ ಭಾರತಕ್ಕೆ ತೊಂದರೆ ಇಲ್ಲ: ಜೈಶಂಕರ್ ಗೆ Araghchi ಭರವಸೆ!

NEET-UG 2026 ಪ್ರಶ್ನೆ ಪತ್ರಿಕೆ ಲೀಕ್ ಕಿಂಗ್ ಪಿನ್, ಪುಣೆಯ ಕೆಮಿಸ್ಟ್ರಿ 'ಲೆಕ್ಚರರ್' ಬಂಧಿಸಿದ ಸಿಬಿಐ!

ಕರ್ನಾಟಕದಲ್ಲಿ ಜೂನ್ 20 ರಿಂದ SIR ಪ್ರಾರಂಭ: ಅಕ್ಟೋಬರ್ 7ಕ್ಕೆ ಅಂತಿಮ ಪಟ್ಟಿ ಪ್ರಕಟ! ಹೇಗೆ ಮಾಡಲಾಗುತ್ತದೆ?

ನಿಮ್ಮ ಮುಖ ಮುಚ್ಕೊಳ್ಳೇಕೆ ಬುರ್ಖಾ ಬೇಕು..; ಜನಿವಾರ, ಶಿವದಾರ ಧರಿಸಲು ಅವಕಾಶ ಕೊಡೋಕೆ ನೀವ್ಯಾವ ದೊಣ್ಣೆನಾಯಕ?: Pratap Simha; Video

IPL 2026: ನಿರ್ಣಾಯಕ ಹಂತದಲ್ಲಿ RCB ತಂಡ ಸೇರಿದ ಮತ್ತೊಬ್ಬ ಮಾರಕ ವೇಗಿ; ಬೆಂಗಳೂರು ತಂಡಕ್ಕೆ ಆನೆಬಲ

SCROLL FOR NEXT