ರಾಜ್ಯ

ಹೈಡ್ರೋಜನ್ ಸಿಲಿಂಡರ್ ಸ್ಫೋಟ: ಮೃತ ಇಂಜಿನಿಯರ್ ಮನೋಜ್ ಕುಟುಂಬಕ್ಕೆ ರೂ.10 ಲಕ್ಷ ನೆರವು

Manjula VN
ಬೆಂಗಳೂರು: 2 ದಿನಗಳ ಹಿಂದಷ್ಟೇ ಏರೋಸ್ಪೇಸ್ ಪ್ರಯೋಗಾಲಯದಲ್ಲಿ ಹೈಡ್ರೋಜನ್ ಸಿಲಿಂಡರ್ ಸ್ಫೋಟಗೊಂಡು ಸಾವನ್ನಪ್ಪಿದ್ದ ಎಂಜಿನಿಯರ್ ಪಿ.ಮನೋಜ್ ಕುಮಾರ್ ಕುಟುಂಬಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್'ಸಿ) ರೂ.10 ಲಕ್ಷ ಪರಿಹಾರ ನೀಡಿದೆ. 
ಐಐಎಸ್'ಸಿ ಆವರಣದ ಏರೋಸ್ಪೇಸ್ ವಿಭಾಗದ ಹೈಪರ್ ಸಾನಿಕ್ ಆ್ಯಂಡ್ ಶಾಕ್ ವೇವ್ ರಿಸರ್ಜ್'ನ ಪ್ರಯೋಗಾಲಯದಲ್ಲಿ ಬುಧವಾರ ಮಧ್ಯಾಹ್ನ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಕೊಂಡು ಮನೋಜ್ ಕುಮಾರ್ ಅವರು ಮೃತಪಟ್ಟು, ಮೂವರು ಇಂಜಿನಿಯರ್ ಗಳು ಗಾಯಗೊಂಡಿದ್ದರು. 
ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಾದ ಅತುಲ್ಯ ಉದಯ್ ಕುಮಾರ್, ಕಾರ್ತಿ ಶೆಣೈ ಹಾಗೂ ನರೇಶ್ ಕುಮಾರ್ ಅವರನ್ನು ಭೇಟಿಯಾದ ಐಐಎಸ್'ಸಿ ನಿರ್ದೇಶಕರು ಹಾಗೂ ಅಧಿಕಾರಿಗಳು ಯೋಗ ಕ್ಷೇಮ ವಿಚಾರಿಸಿದರು.
ಬಳಿಕ ಗಾಯಾಳುಗಳ ಚಿಕಿತ್ಸೆಯ ವೆಚ್ಚ ವಿಮೆ ಮೊತ್ತಕ್ಕಿಂತ ಹೆಚ್ಚಾದರೆ ಸಂಸ್ಥೆಯೇ ಭರಿಸಲಿದೆ ಎಂದು ಗಾಯಾಳುಗಳ ಸಂಬಂಧಿಕರಿಗೆ ಭರವಸೆ ನೀಡಿದರು. 
SCROLL FOR NEXT