ಸಂಗ್ರಹ ಚಿತ್ರ 
ರಾಜ್ಯ

ಭ್ರಷ್ಟಾಚಾರ ವಿರೋಧಿ ಹೋರಾಟ: ಎಸಿಬಿಯಿಂದ ಏಳು ಮಂದಿಗೆ ಸನ್ಮಾನ

ಭ್ರಷ್ಠ ಅಧಿಕಾರಿಗಳ ವಿರುದ್ಧ ಭ್ರಷ್ಠಾಚಾರ ನಿಗ್ರಹ ದಳ (ಎಸಿಬಿ) ಗೆ ದೂರು ನೀಡಿದ್ದ ಏಳು ಮಂದಿಯನ್ನು ಸಂಸ್ಥೆಯು ಭಾನುವಾರ ಸನ್ಮಾನಿಸಿದೆ.

ಬೆಂಗಳೂರು: ಭ್ರಷ್ಠ ಅಧಿಕಾರಿಗಳ ವಿರುದ್ಧ ಭ್ರಷ್ಠಾಚಾರ ನಿಗ್ರಹ ದಳ (ಎಸಿಬಿ) ಗೆ ದೂರು ನೀಡಿದ್ದ ಏಳು ಮಂದಿಯನ್ನು ಸಂಸ್ಥೆಯು ಭಾನುವಾರ ಸನ್ಮಾನಿಸಿದೆ.
ಆರು ಪುರುಷರು ಹಾಗೂ ಓರ್ವ ಮಹಿಳೆಯನ್ನು ಎಸಿಬಿ ಸನ್ಮಾನಿಸಿದ್ದು ಈ ವ್ಯಕ್ತಿಗಳು ದಾಖಲಿಸಿದ ದೂರಿನಿಂಡ  ಭ್ರಷ್ಟ ಅಧಿಕಾರಿಗಳನ್ನು ಬಂಧಿಸುವಲ್ಲಿ ಎಸಿಬಿ ಸಫಲವಾಗಿದ್ದು ಮಾತ್ರವಲ್ಲ ಇದರಿಂದ ಇನ್ನೂ ಹಲವು ಜನರ ಸಮನ್ಸ್ಯೆಗಳನ್ನು ಬಗೆಹರಿಸಲು ನೆರವಾಗಿದೆ.
ಈ ಏಳು ದೂರುಗಳನ್ನು ನೀಡಿದವರನ್ನು "ಹೀರೋಗಳು" ಎಂದು ಕರೆದ ಬ್ಯೂರೋದ ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ (ಐಜಿಪಿ) ಎಂ.ಚಂದ್ರಶೇಖರ್,. '' ಪ್ರತಿಯೊಬ್ಬರೂ ಒಂದಲ್ಲ ಒಂದು ರೂಪದಲ್ಲಿ ಭ್ರಷ್ಟಾಚಾರವನ್ನು ಎದುರುಗೊಂಡಿರುತ್ತಾರೆ. ಇದಕ್ಕೆ ನಾನೂ ಸಹ ಹೊರತಾಗಿಲ್ಲ. ನಾನು ಕಾಲೇಜಿನಲ್ಲಿದ್ದಾಗ ನನ್ನ ರೇಷನ್ ಕಾರ್ಡ್ ಪಡೆಯಲು ಲಂಚ ನೀಡಬೇಕಾಗಿತ್ತು. ನಾನಾಗ ಇದನ್ನು ವಿರೋಧಿಸಿರಲಿಲ್ಲ. ಬದಲು ನಾನು ಲಂಚದ ಹಣ ನಿಡಿದ್ದೆ." ಎಂದಿದ್ದಾರೆ.
ವರ್ಷದಿಂದ ವರ್ಷಕ್ಕೆ ಎಸಿಬಿಗೆ ಸಲ್ಲಿಕೆಯಾಗುವ ದೂರುಗಳ ಸಂಖ್ಯೆ ಹೆಚ್ಚುತ್ತಿದೆ. 2016 ರಲ್ಲಿ 153 ದೂರುಗಳು ಸಲ್ಲಿಕೆಯಾಗಿದ್ದರೆ 2017 ರಲ್ಲಿ 289, ಈ ವರ್ಷದಲ್ಲಿ ಇದು 349ಕ್ಕೆ ತಲುಪಿದೆ.
ಭ್ರಷ್ಟ ಅಧಿಕಾರಿಗಳ ಕಾರಣ ಬಹಳಷ್ಟು ಸರ್ಕಾರಿ ಯೋಜನೆಗಳು ಬಡವರನ್ನು ತಲುಪುತ್ತಿಲ್ಲ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕದ ಜನರಲ್ ಅಡ್ವೋಕೇಟ್ ಉದಯ್ ಹೊಳ್ಳ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT