ಬಳ್ಳಾರಿ: ಜನವರಿ 2ನೇ ವಾರದಲ್ಲಿ ಹಂಪಿ ಉತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಉಪ ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್ ಶುಕ್ರವಾರ ಹೇಳಿದ್ದಾರೆ.
ಮೂರು ದಿನಗಳ ಹಂಪಿ ಉತ್ಸವವನ್ನು 2ದಿನಕ್ಕೆ ನಿಗದಿ ಪಡಿಸಲಾಗಿದೆ, ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಜನವರಿ 12 ಮತ್ತು 13 ರಂದು ಉತ್ಸವ ನಡೆಯುವ ಸಾಧ್ಯತೆಯಿದೆ. ಜಿಲ್ಲಾ ಉಸ್ತುವಾರಿ ಸಚಿವರು ದಿನಾಂಕ ಪ್ರಕಟಿಸಲಿದ್ದಾರೆ.
ಸುಮಾರು ಎಂಟೂವರೆ ಕೋಟಿ ರು ಪ್ರಸ್ತಾವನೆ ಕಳುಹಿಸಲಾಗಿದ್ದು, ಡಿಸೆಂಬರ್ 5 ರಂದು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಕೇವಲ 4ವೇದಿಕೆ ಮಾತ್ರ ಸಿದ್ಧಪಡಿಸಲಾಗುತ್ತದೆ, ವಿರೂಪಾಕ್ಷ ದೇವಾಲಯ, ಎದಿರು ಬಸವಣ್ಣ ದೇವಾಲಯ, ಕಡಲೆಕಾಳು ಗಣೇಶ ಮತ್ತು ಸಾಸಿವೆಕಾಳು ಗಣೇಶ ದೇವಾಲಯಗಳ ಆವರಣದಲ್ಲಿ ವೇದಿಕೆ ಹಾಕಲಾಗಿದೆ, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ,