ಮೈಸೂರಿನ ಆಸ್ಪತ್ರೆಯಲ್ಲಿ 30ಮಂದಿ ಜೀವನ್ಮರಣದ ನಡುವೆ ಹೋರಾಟ 
ರಾಜ್ಯ

ವಿಷಾಹಾರ ಸೇವನೆ: ಮೈಸೂರಿನ ಆಸ್ಪತ್ರೆಯಲ್ಲಿ 30ಮಂದಿ ಜೀವನ್ಮರಣದ ನಡುವೆ ಹೋರಾಟ!

ಚಾಮರಾಜನಗರ ವಿಷ ಪ್ರಸಾದ ದುರಂತಕ್ಕೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ, ಈ ನಡುವೆ ಮೈಸೂರಿನ ಹಲವು ಮಂದಿ ಚಿಕಿತ್ಸೆ ಪಡೆಯುತ್ತಿದ್ದು ...

ಮೈಸೂರು: ಚಾಮರಾಜನಗರ ವಿಷ ಪ್ರಸಾದ ದುರಂತಕ್ಕೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ, ಈ ನಡುವೆ ಮೈಸೂರಿನ ಹಲವು ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಈ ರೀತಿ ಸಂಭವಿಸಬಹುದೆಂದು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ, ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಬಯಸಿದ್ದ, ಆತನಿಗೆ ಈ ರೀತಿ ಸಾವು ಬರುತ್ತದೆಂದು ನಾವು ಎಣಿಸಿರಲಿಲ್ಲ ಎಂದು ಶುಕ್ರವಾರ ಜೆಎಸ್ ಎಸ್ ಆಸ್ಪತ್ರೆಯಲ್ಲಿ ಮೃತರಾದ ಕೃಷ್ಣ ನಾಯ್ಕ ಅವರ ಭಾವಮೈದುನ ಎಂಜಿ ನಾಯಕ್ ತಿಳಿಸಿದ್ದಾರೆ.
ಕೃಷ್ಣ ನಾಯಕ್ ಪತ್ನಿ ಬಿಲ್ಲಿ ಬಾಯ್ ನರ್ಸಿಂಗ್ ವಿದ್ಯಾರ್ಥಿಯಾಗಿದ್ದು, ಮತ್ತು ಮಗಳು ಪ್ರಿಯ ಬಾಯ್ ಅವರ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ,. 
ಮಿಲ್ಲಿ ಬಾಯ್ ಸ್ಥಿತಿ ಚಿಂತಾಜನಕವಾಗಿದೆ, 48 ಗಂಟೆಗಳ ಕಾಲ ಯಾವುದನ್ನು ಹೇಳಲು ಸಾಧ್ಯವಿಲ್ಲ , ಇದೇ ದೇವಾಲಯದಲ್ಲಿ ಹಲವು ಮಂದಿಯನ್ನು ಕಳೆದುಕೊಂಡಿದ್ದೇವೆ ಎಂದು ಮಿಲ್ಲಿ ಬಾಯ್ ಸಂಬಂಧಿ ಗೌರಿ ಹೇಳಿದ್ದಾರೆ.
ಮಿಲ್ಲಿ ಬಾಯ್ 2ನೇ ಮಗಳು ರಾಣಿ ಬಾಯ್ ಪದವಿ ವಿದ್ಯಾರ್ಥಿನಿ, ಮೈಸೂರಿನಲ್ಲಿದ್ದ ಕಾರಣ ಆಕೆ ಬಚಾವಾಗಿದ್ದಾಳೆ
ಮೈಸೂರಿನಲ್ಲಿ ಒಟ್ಟು  104 ಮಂದಿ ರೋಗಿಗಳು ದಾಖಲಾಗಿದ್ದು, ಅದರಲ್ಲಿ 30 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಯುದ್ಧನೌಕೆಗಳ ಕಳುಹಿಸಿ': ಇರಾನ್ ಹೆಡೆಮುರಿ ಕಟ್ಟಲು ಜಗತ್ತಿಗೆ Donald Trump ಸಂದೇಶ!

ನೌಕಾಪಡೆ ಭದ್ರತೆಯಲ್ಲಿ Hormuz ಜಲಸಂಧಿ ದಾಟಿದ ಭಾರತ ಮೂಲದ LPG tanker!

ರಷ್ಯಾ ಮೇಲೂ ಡ್ರೋನ್ ದಾಳಿ: 16 ಮಾನವರಹಿತ ಡ್ರೋನ್ ಗಳ ಹೊಡೆದುರುಳಿಸಿದ Moscow!

'ನಾನು ಕೂಡ ಪರಪುರುಷನ ಜತೆ ಹೋದರೆ ಒಪ್ಪಿಕೊಳ್ಳುತ್ತಾರೆಯೇ?': ನಟ ಜಯಂ ರವಿ ವಿರುದ್ಧ ಮಾಜಿ ಪತ್ನಿ ಆರತಿ ಕಿಡಿ!

Cricket Wedding: ಬಾಲ್ಯದ ಗೆಳತಿ ವಂಶಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ Kuldeep Yadav!

SCROLL FOR NEXT