ರಾಜ್ಯ

ಬೆಂಗಳೂರಿನ ರಸ್ತೆಗೆ ವೀರಯೋಧ ಮೇಜರ್ ಅಕ್ಷಯ್ ಗಿರೀಶ್ ಹೆಸರು, ಆ ರಸ್ತೆ ಎಲ್ಲಿದೆ ಗೊತ್ತೆ?

Raghavendra Adiga
ಬೆಂಗಳೂರು: ಬೆಂಗಳೂರಿನ ರಸ್ತೆಯೊಂದಕ್ಕೆ ಹುತಾತ್ಮ ವೀರಯೋಧ  ಮೇಜರ್ ಅಕ್ಷಯ್ ಗಿರೀಶ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ನಗರದ ಪಶ್ಚಿಮ ವಿಭಾಗದ ರಸ್ತೆಗೆ ಇಂದು  ಮೇಜರ್ ಅಕ್ಷಯ್ ಗಿರೀಶ್ ಹೆಸರನ್ನು ನಾಮಕರಣ ಮಾಡಿ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
"ವಿಜಯ್ ದಿವಸ್ ಆದ ಈ ದಿನ ಕರ್ನಾಟಕದ ಹೆಮ್ಮೆಯ ಸೈನಿಕ ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್ ಅವರ ಹೆಸರನ್ನು ನಗರದ ಪಶ್ಚಿಮ ವಿಭಾಗದ ರಸ್ತೆಗೆ ನಾಮಕರಣ ಮಾಡುತ್ತಿದ್ದೇವೆ.ಅಕ್ಷಯ್ ಗಿರೀಶ್ ನಾಗ್ರೋಟಾದಲ್ಲಿ ಉಗ್ರಗಾಮಿಗಳೊಂದಿಗೆ ಹೋರಾಡಿ ಹುತಾತ್ಮರಾಗಿದ್ದಾರೆ." ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ಯಲಹಂಕ ನ್ಯೂಟೌಟ್‍ನ ಎ ಸೆಕ್ಟರ್ 13ನೇ ಎ ಮುಖ್ಯರಸ್ತೆ, 3ನೇ ಎ ಅಡ್ಡರಸ್ತೆಯು ಇಂದಿನಿಂದ ಮೇಜರ್ ಅಕ್ಷಯ್ ಗಿರೀಶ್ ರಸ್ತೆ ಎನ್ನುವುದಾಗಿ ಕರೆಯಲ್ಪಡುತ್ತದೆ.
ಈ ವಿಷಯದಲ್ಲಿ ಬಿಬಿಎಂಪಿ ಕಳೆದೆರಡು ವರ್ಷ ವಿಳಂಬ ನೀತಿ ಅನುಸರಿಸುತ್ತಾ ಬಂದಿದ್ದು ಈ ಸಂಬಂಧ ರಾಜ್ಯಸಭಾ ಸದಸ್ಯ  ರಾಜೀವ್ ಚಂದ್ರಶೇಖರ್, ಮೇಯರ್ ಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.
ಬೆಂಗಳೂರಿನ ಯಲಹಂಕದವರಾಗಿದ್ದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಭಾರತೀಯ ಸೇನೆ ಸೇರಿಕಾಶ್ಮೀರದ ಗಡಿಯಲ್ಲಿ ಉಗ್ರರೊಡನೆ ಹೋರಾಡುತ್ತಾ 2016ರ ನವೆಂಬರ್‍ನಲ್ಲಿ ಹುತಾತ್ಮರಾಗಿದ್ದರು. 
SCROLL FOR NEXT