ಬೆಂಗಳೂರು: ಕರ್ನಾಟಕದಲ್ಲಿ ಇದಾಗಲೇ ಬರಪೀಡಿತವೆಂದು ಘೋಷಣೆಯಾಗಿರುವ 86 ತಾಲೂಕುಗಳೊಡನೆ ಇನ್ನೂ 28 ತಾಲೂಕುಗಳನ್ನು ಸೇರಿಸಲು ಕರ್ನಾಟಕ ಸರ್ಕಾರ ಸಿದ್ದತೆ ನಡೆಸಿದೆ. .ರಾಜ್ಯದಾದ್ಯಂತ ಬರಗಾಲ ಪರಿಸ್ಥಿತಿಯ ಬಗ್ಗೆ ಇತ್ತೀಚಿನ ಪರಿಶೀಲನೆ ಬಳಿಕ ಕಂದಾಯ ಇಲಾಖೆಯು ಬರಪೀಡಿತ ತಾಲೂಕುಗಳ ಪಟ್ಟಿಗೆ ಇನ್ನೂ 28 ತಾಲೂಕುಗಳನ್ನು ಸೇರ್ಪಡಿಸಲು ನಿರ್ಧರಿಸಿದೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ರಾಜ್ಯ ಶಾಸಕಾಂಗ ಅಧಿವೇಶನದಲ್ಲಿ ಬರಗಾಲದ ಪರಿಸ್ಥಿತಿ ಕುರಿತು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ಕಂದಾಯ ಸಚಿವ ಆರ್. ವಿ. ದೇಶಪಾಂಡೆ 28 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಾಧ್ಯತೆ ಇದೆ.
ಬರಪೀಡಿತ ಎಂದು ಘೋಷಿಸುವ ಮುನ್ನ ತಾಲ್ಲೂಕುಗಳ ಹೆಸರುಗಳನ್ನು ಕ್ಯಾಬಿನೆಟ್ ಉಪಸಮಿತಿಯಲ್ಲಿ ಸಲ್ಲಿಸಲಾಗುತ್ತದೆ. ಇದುವರೆಗೆ ರಾಜ್ಯದ 86 ಬರ ಪಿಡಿತ ತಾಲೂಕುಗಲ ಕುಡಿಯುವ ನೀರಿನ ಸೌಲಭ್ಯಕ್ಕಾಗಿ 43 ಕೋಟಿ ರು. ಹಾಗೂ ಪಶುಗಳಿಗೆ ಮೇವು, ನೀರಿನ ಪೂರೈಕೆಗಾಗಿ ಪಶುಸಂಗೋಪನೆ ಇಲಾಖೆಗೆ 15 ಕೋಟಿ ರು. ಅನುದಾನ ಬಿಡುಗಡೆಯಾಗಿದೆ.