ರಾಜ್ಯ

ಶೇಕಡಾ 59ರಷ್ಟು ಅತ್ಯಾಚಾರ ಪ್ರಕರಣಗಳಿಗೆ ಕಾರಣ 'ಲವ್, ಸೆಕ್ಸ್, ಧೋಖಾ'!

Shilpa D
ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ 329 ಅತ್ಯಾಚಾರ ಪ್ರಕರಣಗಳು ನಡೆದಿವೆ. ಇದರಲ್ಲಿ  ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆದಿರುವ ಪ್ರಕರಣಗಳ ಸಂಖ್ಯೆ ಹೆಚ್ಚಿವೆ.
ಜನವರಿ 2016 ರಿಂದ ನವೆಂಬರ್ 2018ರ ವರೆಗೆ  329 ರೇಪ್ ಕೇಸ್ ನಡೆದಿವೆ, ಅದರಲ್ಲಿ 194 ಕೇಸ್ ಗಳು ಈ ಕೆಟಗರಿಯಲ್ಲಿ ನಡೆದಿವೆ, 2ನೇಯದಾಗಿ ನಡೆದಿರುವ 95 ಕೇಸ್ ಗಳಲ್ಲಿ  ಪರಿಚಿತರಿಂದ ನಡೆದಿರುವ ಅತ್ಯಾಚಾರ ಪ್ರಕರಣಗಳಾಗಿವೆ ಎಂದು ಸಿಸಿಬಿ ಉಪ ಆಯುಕ್ತ, ಬಿ.ಎಸ್ ಮೋಹನ್ ಕುಮಾರ್ ತಿಳಿಸಿದ್ದಾರೆ.
ಭವಿಷ್ಯದಲ್ಲಿ ನಾವು ಮದುವೆಯಾಗುತ್ತೇವೆ, ಹೀಗಾಗಿ  ದೈಹಿಕ ಸಂಬಂಧ ಇಟ್ಟುಕೊಳ್ಳಲು ನಂಬಿಸಿ ಒಪ್ಪಿಸುತ್ತಾರೆ ಆದರೆ ಮದುವೆಯಾಗುವುದಿಲ್ಲ, ಇದು ಕೂಡ ವಂಚನೆ ಅಡಿಯಲ್ಲಿ ಬರುತ್ತದೆ ಎಂದು ತಿಳಿಸಿದ್ದಾರೆ.
ಇನ್ನೂ ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ, ಸುಮಾರು 7,032 ಕೇಸ್ ಗಳು ಮಹಿಳೆಯ ವಿರುದ್ಧದ ಕಿರುಕುಳಗಳಾಗಿವೆ, ಇದರಲ್ಲಿ ಮುಕ್ಕಾಲು ಭಾಗ ಮಹಿಳೆಯ ವಿರುದ್ಧದ ನಡೆದಿರುವ ಕೇಸ್ ಗಳಾಗಿವೆ,
ಪತಿ, ಹಾಗೂ ಪತಿಯ ಸಂಬಂಧಿಕರಿಂದ ಮಹಿಳೆಯರ ಮೇಲೆ ವಿವಿಧ ರೀತಿಯ ಹಲ್ಲೆಗಳು ನಡೆದಿವೆ. ಇನ್ನೂ ಈ ಅವಧಿಯಲ್ಲಿ ಬೆಂಗಳೂರಿನಲ್ಲಿ 149 ವರದಕ್ಷಿಣೆ ಕಿರುಕುಳ ಪ್ರಕರಣಗಳು ದಾಖಲಾಗಿವೆ, 
ಪೋಕ್ಸೋ ಅಡಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ದೂರು ದಾಖಲಾಗಿವೆ, ದಾಖಲೆಯಾದ 1,385 ಕೇಸ್ ಗಳಲ್ಲಿ ಸುಮಾರು 1, 087 ಕೇಸ್ ಗಳು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಂಬಂಧಿಕ ಕೇಸ್ ಗಳಾಗಿವೆ. 11 ಕೇಸ್ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ್ದಾಗಿವೆ, 
ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಾಗಿವೆ, ಈ ಸಂಬಂಧ ಹಲವು ಮಂದಿಯನ್ನು ಬಂಧಿಸಲಾಗಿದೆ.
SCROLL FOR NEXT