ಮೈಸೂರು: ಆಧುನಿಕ ವಿಧಾನಗಳನ್ನು ಅನುಸರಿಸಿ ಕೃಷಿ ಮಾಡಿ ಬೆಳೆದ ಬೆಳೆಗಳನ್ನು ಮಾರಾಟ ಮಾಡಿ, ಮುಖದ ಮೇಲೆ ನಗು ತರಿಸಿಕೊಳ್ಳುವ ಕಾಲ ಬಹಳ ಹಿಂದೆಯೇ ಕಳೆದು ಹೋಗಿದೆ, ಬಂಪರ್ ಬೆಳೆ ಬಂದ ಸಮಯದಲ್ಲಿ ಸರಿಯಾದ ಬೆಲೆ ಸಿಗದೇ ಉತ್ಪನ್ನಗಳ ಮಾರಾಟ ದರ ಪಾತಾಳಕ್ಕಿಳಿಯುತ್ತದೆ.
ಹಣವನ್ನು ಸಾಲವನ್ನಾಗಿ ತಂದು, ಸಾಂಪ್ರಾದಾಯಿಕ ಅಥವಾ ವಾಣಿಜ್ಯ ಬೆಳೆ ಬೆಳೆಯುವ ರೈತರು ಸಾಲದ ಸುಳಿಯಲ್ಲಿ ಸಿಲುಕುತ್ತಾರೆ, ಬೆಳೆಯುವ ತರಕಾರಿ ಕೆಜಿ ಒಂದಕ್ಕೆ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.
ಮೆಣಸಿನಕಾಯಿ ಕೆಜಿಗೆ 15 ರು, ಬೀನ್ಸ್ 17, ಬೀಟ್ ರೂಟ್ 9 ರು, ಗೆ ಮಾರಾಟವಾಗುತ್ತಿದೆ, 1 ಎಕರೆಗೆ 30 ಸಾವಿರ ರು ಖರ್ಚು ಮಾಡಿ ರೈತ ಬೀನ್ಸ್ ಬೆಳೆಯುತ್ತಾನೆ, ಆದರೆ ಅವನಿಗೆ ಸಿಗುವುದು 15 ಸಾವಿರಕ್ಕಿಂತಲೂ ಕಡಿಮೆ ಹಣ,
ಇನ್ನೂ ಒಂದು ಎಕರೆಗೆ 40 ಸಾವಿರ ರೂ ಖರ್ಚು ಮಾಡಿ, ಎಲೆಕೋಸು ಬೆಳೆದರೆ ಅದಕ್ಕೆ ಸಿಗುವುಗು ಕೇವಲ 12 ಸಾವಿರ ರು ಮಾತ್ರ, ಹೀಗಾಗಿ ನಷ್ಟವಾಗುವ ಸೂಚನೆ ಸಿಕ್ಕ ರೈತರು ಬೆಳೆಯನ್ನು ಕೊಯ್ಲು ಮಾಡುವ ಗೋಜಿಗೆ ಹೋಗುವುದಿಲ್ಲ,
ತರಕಾರಿಗಳ ಬೆಲೆ ಮಾರುಕಟ್ಟೆಯಲ್ಲಿ ಎಷ್ಟಿರುತ್ತದೆ ಎಂಬುದನ್ನು ಪರೀಶೀಲಿಸಿ, ತಮಿಳುನಾಡಿನ ತಾಳವಾಡಿ ಮತ್ತು ಸತ್ಯಮಂಗಲ ಗಳಲ್ಲಿ ಸಂಕ್ರಾಂತಿ ಮತ್ತು ಕೇರಳದಲ್ಲಿ ಕ್ರಿಸ್ ಮಸ್ ಸಂದರ್ಭದಲ್ಲಿ ಮಾರಾಟ ಮಾಡಲಾಗುತ್ತದೆ.
ಇದೇ ರೀತಿಯ ಬೆಲೆ ಏರಿಳಿತ ಬಾಳೆಹಣ್ಣು ಕೃಷಿಯಲ್ಲಿ ಇದೇ ರೀತಿಯ ವ್ಯತ್ಯಾಸವಾಗುತ್ತದೆ, ಏಲಕ್ಕಿ ಮತ್ತು ನೇಂದ್ರ ಬಾಳೆಹಣ್ಣಿನ ಬೆಲೆ ಪಾತಾಳಕ್ಕಿಳಿದಿದೆ. ಕೇವಲ ಹಣ್ಣು ಮತ್ತು ತರಕಾರಿ ಮಾತ್ರವಲ್ಲದೇ, ಹತ್ತಿ, ಅರಿಶಿನ, ಬೆಂಡೇಕಾಯಿ ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆ ತೀರಾ ಇಳಿಮುಖವಾಗಿದೆ.
ಮಂಡ್ಯ,ಮೈಸೂರು, ಚಾಮರಾಜನಗರ ಭಾಗಗಳಲ್ಲಿ ಕಬ್ಬು ಕಟಾವು ಮಾಡಿ, ಸಕ್ಕರೆ ಕಾರ್ಖಾನೆ ಆವರಣಕ್ಕೆ ತಂದು ಹಾಕಲಾಗಿದೆ. ಶೇ.4 ರಷ್ಟು ಬಡ್ಡಿಗೆ ಸಾಲ ತಂದು ಬೆಳೆ ಬೆಳೆದರೇ ಮಾಡಿದ ಕೃಷಿಗೆ ಬೆಲೆಯಲ್ಲದೇ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ.