ಬೆಳಗಾವಿ: ಫೆಬ್ರವರಿ ಮಧ್ಯಂತರ ಅವಧಿಯಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡುತ್ತೇನೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಹೇಳಿದ್ದಾರೆ.
ನಿನ್ನೆ ಸಂಜೆ ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಜೆಟ್'ಗೆ ಕಾಯದೆ ರಾಜ್ಯದ ಬಜೆಟ್'ನ್ನು ಫೆಬ್ರವರಿ ಮಧ್ಯಂತರ ಅವಧಿಯಲ್ಲಿ ಮಂಡನೆ ಮಾಡಲಾಗುತ್ತದೆ. ಈ ಬಾರಿಯ ಬಜೆಟ್ ಮಂಡನೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ರಾಜ್ಯ ಸರ್ಕಾರದ ಭರವಸೆಯಂತೆ ರೂ, 17 ಲಕ್ಷ ರೈತರ ತಲಾ ರೂ.50 ಸಾವಿರ ಕೃಷಿ ಸಾಲದ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ 10 ದಿನಗಳಲ್ಲಿ ಪಾವತಿ ಮಾಡಲಾಗುವುದು. ಜೊತೆಗೆ ಅಷ್ಟೂ ಮಂದಿಗೆ ಸರ್ಕಾರದ ವತಿಯಿಂದಲೇ ಋಣಮುಕ್ತ ಪ್ರಮಾಣಪತ್ರ ವಿತರಿಸಲಾಗುವುದು. ಉಳಿದ ರೂ.1.5 ಲಕ್ಷ ಬಾಕಿ ಹಣವನ್ನು ಮುಂದಿನ ಬಜೆಟ್ ನಲ್ಲಿ 2 ಕಂತುಗಳಲ್ಲಿ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲವನ್ನು ಮನ್ನಾ ಮಾಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಒಟ್ಟು ರೂ.21 ಲಕ್ಷ ಮಂದಿಯ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಮನ್ನಾಗೆ ಸಿದ್ಧತೆ ನಡೆಸಿದ್ದೇವೆ. ಇದರಲ್ಲಿ ರೂ.17 ಲಕ್ಷ ಖಾತೆಗಳು ಚಾಲ್ತಿ ಖಾತೆ ಹಾಗೂ 2.82 ಲಕ್ಷ ಎನ್'ಪಿಎ ಖಾತೆಗಳಿವೆ.
ಬಜೆಟ್ ನಲ್ಲಿ ಈಗಾಗಲೇ ರೂ.6,500 ಕೋಟಿ ಮೀಸಲಿಟ್ಟಿದ್ದು, ಈ ಹಣ ಬಳಕೆ ಮಾಡಿಕೊಂಡು ರೂ.17 ಲಕ್ಷ ಖಾತೆಗಳಿಗೆ ಮೊದಲ ಹಂತವಾಗಿ ತಲಾ ರೂ. ಸಾವಿರ ಸಾಲ ಪಾವತಿ ಮಾಡಲಾಗುವುದು. ಜೊತೆಗೆ ಸರ್ಕಾರದ ವತಿಯಿಂದಲೇ ಋಣಮುಕ್ತ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.
ಸಹಕಾರಿ ಬ್ಯಾಂಕ್ ಗಳ ಸಾಲ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾದಿಂ ಲಕ್ಷ ರೈತ ಕುಟುಂಬಗಳಿಗೆ ಅನುಕೂಲ ಆಗಲಿದೆ. ಈವರೆಗೂ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಯಾರೊಬ್ಬರಿಗೂ ಸಾಲ ವಸೂಲಾತಿ ನೋಟಿಸ್ ನೀಡಿಲ್ಲ. ಬದಲಿಗೆ ಬಾಕಿ ಉಳಿಸಿಕೊಂಡಿರುವ ಸಾಲ ತೀರಿಸಲು ರಿಯಾಯಿತಿ ಕೊಡುಗೆಗಳನ್ನು ತಿಳಿಸಲು ಪತ್ರಗಳನ್ನು ಬರೆದಿದ್ದಾರೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.