ಔರಾದ್: ಟೀ ಅಂಗಡಿಗೆ ನುಗ್ಗಿದ ಲಾರಿ, ನಾಲ್ವರ ದುರ್ಮರಣ
ಔರಾದ್: ಕಂಟೈನರ್ ಲಾರಿಯಿಒಂದು ಟೀ ಅಂಗಡಿಗೆ ನುಗ್ಗಿದ ಪರಿಣಾಮ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ಬೀದರ್ ಜಿಲ್ಲೆ ಔರಾದ್ ನಲ್ಲಿ ಸಂಭವಿಸಿದೆ.
ಶನಿವಾರ ಔರಾದ್ ನ ಬೋರಾಳ ಸಮೀಪ ನಡೆದ ಘಟನೆಯಲ್ಲಿ ಬೋರಾಳ ಗ್ರಾಮದ ರಮೇಶ್ ಜೈವಂತರಾವ್(45), ಧನರಾಜ್ ಮಡಿವಾಳಪ್ಪ(50), ಸಂಜುಕುಮಾರ ವಿಶ್ವನಾಥ್(35) ಹಾಗೂ ಲಾರಿ ಚಾಲಕ ಅಮೂಲ್ (32) ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಲ್ಲಪ್ಪ ದೇವರಾಜ್ ಅವರಿಗೆ ಬೀದರ್ ನಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚುವರಿ ಚಿಕಿತ್ಸೆಗಾಗಿ ಹೈದರಾಬಾದ್ ಗೆ ಕಳಿಸಲಾಗಿದೆ ಎಂದು ಸಿಪಿಐ ರಮೇಶ್ ಕುಮಾರ್ ಮೈಲೂರಕರ್ ಹೇಳಿದ್ದಾರೆ.
ಬೀದರ್ ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಟೀ ಅಂಗಡಿಗೆ ನುಗ್ಗಿದೆ. ಆವೇಳೆ ಅಂಗಡಿಯಲ್ಲಿ ಟೀ ಕುಡಿಯುತ್ತಾ ಕುಳಿತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿ ಪಲ್ಟಿಯಾದ ಕಾರಣ ಚಾಲಕ ಸಹ ಸಾವಿಫ಼್ಗೀಡಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಘಟನೆ ಸಂಬಂಧ ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.