ಬೆಂಗಳೂರು: ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಕಟವಾಗಿದ್ದು ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಈ ಸಾಲಿನ ಪ್ರಶಸ್ತಿ ಲಭಿಸಿದೆ.
ಡಿ. 31ರಂದು ಸಂಜೆ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
ಇನ್ನು 2018ನೇ ಸಾಲಿನ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಪತ್ರಕರ್ತರ ಆಯ್ಕೆ ನಡೆದಿದ್ದು ಕನ್ನಡ ಪ್ರಭ ದಿನಪತ್ರಿಕೆಯ ಸಂಪಾದಕ ರವಿ ಹೆಗಡೆ ಅವರಿಗೆ ಪ್ರಶಸ್ತಿ ಲಭಿಸಿದೆ.
ಇದಲ್ಲದೆ ಕೆ.ಎಸ್.ಸಚ್ಚಿದಾನಂದ ಮೂರ್ತಿ (ಸಚ್ಚಿ), ತಿಮ್ಮಪ್ಪ ಭಟ್, ಎ.ಬಾಲಚಂದ್ರ, ವೆಂಕಟನಾರಾಯಣ, ರಾಮಣ್ಣ ಎಚ್. ಕೋಡಿ ಹೊಸಳ್ಳಿ , ತುಂಗಾ ರೇಣುಕಾ, ಕೆ.ವಿ.ಪ್ರಭಾಕರ್, ಡಿ.ಸಿ.ನಾಗೇಶ್ , ರಾಜಶೇಖರ್ ಹತ್‌ಗುಂದಿ , ವೇದಂ ಜಯಶಂಕರ್ , ರಾಜಶೇಖರ ಅಬ್ಬೂರು , ಶಿವಾಜಿ ಗಣೇಶನ್ , ಕೆ.ಬದ್ರುದ್ದೀನ್ ಮಾಣಿ ಮತ್ತು ಕೆ.ಎನ್.ತಿಲಕ್ ಕುಮಾರ್ ಕೂಡಾ ಈ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.