ಬೆಂಗಳೂರು ನಗರದ ಪೊಲೀಸರ (ಸಾಂದರ್ಭಿಕ ಚಿತ್ರ) 
ರಾಜ್ಯ

ನಗರದ ಸುರಕ್ಷತೆಗಾಗಿ 24 ಗಂಟೆಯೂ ಡ್ಯೂಟಿ; ಇದು ಬೆಂಗಳೂರು ಪೊಲೀಸ್

ಮುಂಬೈ ಪೊಲೀಸರು 8 ಗಂಟೆ ಅವಧಿಯ ಪಾಳಿಯನ್ನು ಪರಿಚಯಿಸಿದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ ಬೆಂಗಳೂರು ನಗರದ ಪೊಲೀಸರು ಇಂತಹ ಪಾಳಿ ಪರಿಚಯಿಸಲು ಸಾಧ್ಯವಾಗುತ್ತಿಲ್ಲ. ಆದರೂ ಇದು ಆದರೂ ಅಗತ್ಯವಾಗಿದೆ.

ಬೆಂಗಳೂರು: ಪೊಲೀಸ್ ಕೆಲಸ ಅಂದರೇನೆ ಹಾಗೆ , ಕುಟುಂಬದೊಂದಿಗೆ  ಕಾಲ ಕಳೆಯಲು  ಆಗಲ್ಲ. ದೈಹಿಕ  ಶ್ರಮತೆಗಾಗಿ ಒಂದಿಷ್ಟು ಬಿಡುವು ಸಿಗಲ್ಲ. ಸರಿಯಾದ ಸಮಯಕ್ಕೆ ತಕ್ಕಂತೆ ತಿಂಡಿ, ಊಟ ಮಾಡುವುದಕ್ಕೂ ಆಗೋದಿಲ್ಲ.  ಆಪ್ತರನ್ನು  ಭೇಟಿ ಮಾಡುವುದಕ್ಕೂ ಆಗುವುದಿಲ್ಲ..ಯಾವಾಗಲೂ ಜಾಗ್ರತೆ ಹಾಗೂ ದಕ್ಷತೆಯಿಂದಲೇ  ಇರಬೇಕಾಗುತ್ತದೆ.

ಈ ಮಧ್ಯೆ  ಮುಂಬೈ  ಪೊಲೀಸರು  8 ಗಂಟೆ ಅವಧಿಯ  ಪಾಳಿಯನ್ನು ಪರಿಚಯಿಸಿದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ  ಬೆಂಗಳೂರು ನಗರದ ಪೊಲೀಸರು ಇಂತಹ  ಪಾಳಿ ಪರಿಚಯಿಸಲು ಸಾಧ್ಯವಾಗುತ್ತಿಲ್ಲ. ಆದರೂ ಇದು ಆದರೂ ಅಗತ್ಯವಾಗಿದೆ. 

 ಪೊಲೀಸ್ ಹುದ್ದೆ  ಕಷ್ಟಕರ ಕೆಲಸವಾಗಿದ್ದು, ಸಮಾಜ ಘಾತುಕ ಶಕ್ತಿಗಳಿಂದ  1 ಕೋಟಿ 2 ಲಕ್ಷಕ್ಕಿಂತಲೂ ಹೆಚ್ಚಿನ ಜನರನ್ನು  ರಕ್ಷಿಸುವ  ಪೊಲೀಸರ ಹುದ್ದೆ ಕಷ್ಟಕರವಾದದ್ದು ಎಂದು ತಜ್ಞರು ಹೇಳುತ್ತಾರೆ.ಪೊಲೀಸರು ತಮ್ಮ ಕುಟುಂಬ ಸದಸ್ಯರೊಂದಿಗೆ  ಕಾಲ ಕಳೆಯಲು ಹಾಗೂ ವಿಶ್ರಾಂತಿ ಹೊಂದಲು  8 ಗಂಟೆ ಅವಧಿಯ ಪಾಳಿಯ ವ್ಯವಸ್ಥೆ ಜಾರಿ ತರಬೇಕೆಂಬ  ಒತ್ತಡವೂ ಹೆಚ್ಚಾಗಿದೆ.

ಒಂದು  ಕೋಟಿಗೂ ಹೆಚ್ಚು ಜನರಿರುವ ಬೆಂಗಳೂರಿನಲ್ಲಿ   ಕೇವಲ 6 ಸಾವಿರ ಮಂದಿ ಪೊಲೀಸರಿದ್ದಾರೆ.  4 ಸಾವಿರ ಮಂದಿ ನಗರ  ಸಶಸ್ತ್ರ ಮೀಸಲು ಪಡೆಯಲ್ಲಿದ್ದರೆ, 2.500 ಮಂದಿ ಟ್ರಾಫಿಕ್  ಪೊಲೀಸರಿದ್ದಾರೆ. ಒಟ್ಟಾರೇ, ಶೇ. 30ರಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿದೆ.  

ಇದಕ್ಕೂ ಮುನ್ನ ಪೊಲೀಸರಿಗೆ ಮೂರು ಪಾಳಿ ಇತ್ತು. ಆದರೆ, ಈಗ  ತಲಾ 12 ಗಂಟೆಯ ಅವಧಿಯ ಎರಡು ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.  ಬೆಂಗಳೂರಿನ ಐದು ವಿಭಾಗಗಳಲ್ಲಿ 14ಕ್ಕೂ ಹೆಚ್ಚು ಅವಧಿಯಲ್ಲಿ ಪೊಲೀಸರು  ಕೆಲಸ ನಿರ್ವಹಿಸಬೇಕಾಗಿದೆ. ಕೊಲೆ, ರಾತ್ರಿ ಗಸ್ತು, ನ್ಯಾಯಾಲಯಕ್ಕೆ   ಹಾಜರು ಮತ್ತಿತರ ಕೆಲಸಗಳಿಗಾಗಿ ಅವರನ್ನು ನಿಯೋಜಿಸಲಾಗುತ್ತಿದೆ. ಪ್ರತಿ ಠಾಣೆಯಲ್ಲೂ 150 ಪೊಲೀಸರ ಅವಶ್ಯಕತೆ ಇದೆ ಎಂದು ನಿವೃತ್ತಿ ಪೊಲೀಸ್ ಅಧಿಕಾರಿ ಬಿ. ಬಿ. ಅಶೋಕ್ ಕುಮಾರ್ ಹೇಳುತ್ತಾರೆ.

ಬೆಳಿಗ್ಗೆ 8-30ಕ್ಕೆ ಕೆಲಸಕ್ಕೆ ಕೆಲಸಕ್ಕೆ ಬಂದರೆ ರಾತ್ರಿ 8-30 ಕ್ಕೆ   ಠಾಣೆ ಬಿಟ್ಟು ಮನೆಗೆ ತಲುಪಲು 10 ಗಂಟೆ ಆಗುತ್ತದೆ. ಕನಿಷ್ಠವೆಂದರೂ 130 ಸಿಬ್ಬಂದಿ ಬೇಕಾಗುತ್ತದೆ ಎಂದು ಸಂಪಿಗೆಹಳ್ಳಿ ಠಾಣೆ ಪೊಲೀಸರೊಬ್ಬರು ಹೇಳುತ್ತಾರೆ.

ಮನುಷ್ಯರನ್ನು ಮನುಷ್ಯತ್ವದಿಂದ ನೋಡಬೇಕಾಗುತ್ತದೆ. ಆದರೆ, ಇದು ಪೊಲೀಸ್ ಇಲಾಖೆಗೆ ಅನ್ವಯವಾಗುವುದಿಲ್ಲ.  ಪೊಲೀಸರು ತಮ್ಮ  ಮಾನಸಿಕ ಹಾಗೂ ದೈಹಿಕ ಶಕ್ತಿ ಮೀರಿ ಕೆಲಸ ಮಾಡುತ್ತಾರೆ. ಹೇಗೆ ದಕ್ಷತೆ ತೋರಿಸಲು ಸಾಧ್ಯವಾಗುತ್ತದೆ ಎಂದು  ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್. ಟಿ. ರಮೇಶ್ ಪ್ರಶ್ನಿಸುತ್ತಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT