ರಾಜ್ಯ

ನಮ್ಮ ಮೆಟ್ರೊ ಸ್ಮಾರ್ಟ್ ಕಾರ್ಡ್: ಟಾಪ್ ಅಪ್ ಗರಿಷ್ಟ ಮಿತಿ ರೂ. 3 ಸಾವಿರಕ್ಕೆ ಹೆಚ್ಚಳ ಶೀಘ್ರ

Sumana Upadhyaya
ಬೆಂಗಳೂರು: ಮೆಟ್ರೊದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತಮ್ಮ ಸ್ಮಾರ್ಟ್ ಕಾರ್ಡುಗಳ ಟಾಪ್ ಅಪ್ ನ್ನು 3,000ರೂಪಾಯಿಗೆ ಹೆಚ್ಚಳ  ಮಾಡಲು ಮೆಟ್ರೊ ರೈಲು ನಿಗಮ ನಿಯಮಿತ ನಿರ್ಧರಿಸಿದೆ.
ಮೆಟ್ರೊದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನೀಡಲಾಗುತ್ತಿರುವ ಸ್ಮಾರ್ಟ್ ಕಾರ್ಡಿನಲ್ಲಿ ಇದುವರೆಗೆ ಒಂದು ಬಾರಿಗೆ ಗರಿಷ್ಟ 1,500 ಪಾವತಿಸಿ ವಾರ್ಷಿಕ ಕಾರ್ಡು ಪಡೆಯಬೇಕಾಗುತ್ತಿತ್ತು.ಒಂದು ವರ್ಷದವರೆಗೆ ಅದರ ಮೌಲ್ಯವಿರುತ್ತದೆ. ಇದರಡಿ ಮೆಟ್ರೊ ಪ್ರಯಾಣಿಕರಿಗೆ ಪ್ರಯಾಣ ದರದ ಮೇಲೆ ಶೇಕಡಾ 15ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅದನ್ನೀಗ 3,000ರೂಪಾಯಿಗೆ ಹೆಚ್ಚಳ ಮಾಡಲು ಮೆಟ್ರೊ ನಿಗಮ ನಿರ್ಧರಿಸಿದೆ.
ಬಿಎಂಆರ್ ಸಿಎಲ್ ನ ನಿರ್ವಹಣೆಯ ಕಾರ್ಯಕಾರಿ ನಿರ್ದೇಶಕ ಎ.ಎಸ್.ಶಂಕರ್ ಮಾತನಾಡಿ, ಮೆಟ್ರೊದ ವಾರ್ಷಿಕ ಟಾಪ್ ಅಪ್ ಕಾರ್ಡಿನ ರಿಚಾರ್ಜ್ ಮೌಲ್ಯವನ್ನು 1500ರೂಪಾಯಿಗಳಿಂದ 3,000 ರೂಪಾಯಿಗಳಿಗೆ ಹೆಚ್ಚಿಸಲಿದ್ದೇವೆ. ಮೆಟ್ರೊ ನಿಲ್ದಾಣಗಳಲ್ಲಿ ನಗದು ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡುಗಳನ್ನು ಬಳಸಿ ಟಾಪ್ ಅಪ್ ಮಾಡುವವರಿಗೆ 3,000 ರೂಪಾಯಿ ಹಾಗೂ ಆನ್ ಲೈನ್ ಮೂಲಕ ಮಾಡುವವರಿಗೆ 2,500 ರೂಪಾಯಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಮೆಟ್ರೊ ಸಂಚಾರ ವ್ಯಾಪ್ತಿಯ ವಿಸ್ತರಣೆಯನ್ನು ನೋಡಿಕೊಂಡು ಸ್ಮಾರ್ಟ್ ಕಾರ್ಡು ಟಾಪ್ ಅಪ್ ಮೌಲ್ಯವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ತಿಳಿಸಿದರು.
2011ರಲ್ಲಿ ಎಂ.ಜಿ.ರಸ್ತೆ ಮತ್ತು ಬೈಯಪ್ಪನಹಳ್ಳಿ ಮಧ್ಯೆ ಮೆಟ್ರೊ ರೈಲು ಸಂಚಾರ ಆರಂಭಗೊಂಡಾಗ ಸ್ಮಾರ್ಟ್ ಕಾರ್ಡು ವ್ಯವಸ್ಥೆ ಜಾರಿಗೆ ತರಲಾಗಿತ್ತು.
ಮೆಟ್ರೊದಲ್ಲಿ ಪ್ರತಿನಿತ್ಯ ಸಂಚರಿಸುವವರು ತಿಂಗಳಲ್ಲಿ ಎರಡು ಬಾರಿ ಸರದಿ ಸಾಲಿನಲ್ಲಿ ನಿಂತು ಸ್ಟಾರ್ಟ್ ಕಾರ್ಡುಗಳಿಗೆ ರಿಚಾರ್ಜ್ ಮಾಡಿಸಿಕೊಳ್ಳಲು ಹರಸಾಹಸಪಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಶಂಕರ್ ತಿಳಿಸಿದರು.
ಪ್ರಸ್ತುತ ಮೆಟ್ರೊದಲ್ಲಿ ಸಂಚರಿಸುವ ಸುಮಾರು 3.7 ಲಕ್ಷ ಮಂದಿ ಸ್ಮಾರ್ಟ್ ಕಾರ್ಡುಗಳನ್ನು ಬಳಸುತ್ತಿದ್ದಾರೆ.
SCROLL FOR NEXT