ಸಾಂದರ್ಭಿಕ ಚಿತ್ರ 
ರಾಜ್ಯ

ಪಾರಿವಾಳ ಹಾರಿ ಬಿಟ್ಟದ್ದಕ್ಕೆ ಎರಡು ವರ್ಷದ ಮಗುವನ್ನು ಕೊಂದ 15 ವರ್ಷದ ಬಾಲಕ

ಪಾರಿವಾಳವನ್ನು ಬಿಟ್ಟದ್ದಕ್ಕಾಗಿ ನೀಲಗಿರಿ ತೋಟದಲ್ಲಿ ಎರಡು ವರ್ಷದ ಮಗುವನ್ನು ಕೊಂದ 15 ವರ್ಷದ...

ಬೆಂಗಳೂರು: ಪಾರಿವಾಳವನ್ನು ಹಾರಿ ಬಿಟ್ಟದ್ದಕ್ಕಾಗಿ ನೀಲಗಿರಿ ತೋಟದಲ್ಲಿ ಎರಡು ವರ್ಷದ ಮಗುವನ್ನು ಕೊಂದ 15 ವರ್ಷದ ಬಾಲಕನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಗುವನ್ನು ಕೊಂದು ಬಾಲಕ ಮನೆಗೆ ಹಿಂತಿರುಗುತ್ತಿದ್ದ.
ನಿಖರ ಮಾಹಿತಿ ಪಡೆದ ಪೊಲೀಸರು 8ನೇ ತರಗತಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕನನ್ನು ಬಂಧಿಸಿದ್ದಾರೆ.
ಬಸವರಾಜ್ ಮತ್ತು ಯೆಂಕಮ್ಮ ಅವರ ಮಗುವಾದ ಎರಡು ವರ್ಷದ ವೆಂಕಟೇಶ್ ಬುಧವಾರ ಸಾಯಂಕಾಲ ಮೃತಪಟ್ಟಿರುವುದು ತಿಳಿದುಬಂತು. ಕೊಂದ ಬಾಲಕನೇ ವೆಂಕಟೇಶ್ ನ್ನು ಕೊನೆಯ ಸಲ ನೋಡಿದ್ದು ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಅವನನ್ನು ಬಂಧಿಸಿದಾಗ ಪೊಲೀಸರ ಮುಂದೆ, ಕಳೆದೆರಡು ದಿನಗಳಿಂದ ತನ್ನ ಮೂರು ಪಾರಿವಾಳಗಳನ್ನು ಗೂಡಿನಿಂದ ಬಿಟ್ಟ ಕಾರಣ ಸಿಟ್ಟಿನಿಂದ ವೆಂಕಟೇಶ್ ನನ್ನು ಕೊಂದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಮಾರುತಿ ಲೇ ಔಟ್ ನಲ್ಲಿ ವಾಸಿಸುತ್ತಿರುವ ವೆಂಕಟೇಶ್ ಕುಟುಂಬ ರಸ್ತೆ ಬದಿ ಗಾಡಿಯಲ್ಲಿ ಉಪಹಾರ ಮಾರಾಟ ಮಾಡಿ ಜೀವನ ಸಾಗಿಸುತ್ತಿತ್ತು. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನವರಾದ ವೆಂಕಟೇಶ್ ತಮ್ಮ ಮೂವರು ಮಕ್ಕಳೊಂದಿಗೆ ಜೀವನ ನಿರ್ವಹಣೆಗಾಗಿ ಬೆಂಗಳೂರಿಗೆ ಎಂಟು ತಿಂಗಳ ಹಿಂದೆ ಬಂದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT