ಬೆಂಗಳೂರು ನಗರದಲ್ಲಿನ ವಾಹನಗಳ (ಸಾಂದರ್ಭಿಕ ಚಿತ್ರ) 
ರಾಜ್ಯ

ಬೆಂಗಳೂರಿನಲ್ಲಿ ನಾಳೆ ವಿರಳ ಸಂಚಾರ ದಿನ!

ರಾಜ್ಯಸರ್ಕಾರದ ಮಹತ್ವಕಾಂಕ್ಷಿ ವಿರಳ ಸಂಚಾರ ದಿನ ಅಭಿಯಾನದ ಮೊದಲ ಆವೃತ್ತಿ ನಾಳೆ ಆರಂಭಗೊಳ್ಳಲಿದ್ದು, ರಾಜಧಾನಿ ಬೆಂಗಳೂರು ಸಜ್ಜುಗೊಂಡಿದೆ.

ಬೆಂಗಳೂರು: ರಾಜ್ಯಸರ್ಕಾರದ ಮಹತ್ವಕಾಂಕ್ಷಿ ವಿರಳ ಸಂಚಾರ ದಿನ ಅಭಿಯಾನದ ಮೊದಲ ಆವೃತ್ತಿಗೆ ನಾಳೆ ಚಾಲನೆ ದೊರೆಯಲಿದ್ದು, ರಾಜಧಾನಿ ಬೆಂಗಳೂರು ಸಜ್ಜುಗೊಂಡಿದೆ.

 ನಗರದ ರಸ್ತೆಯಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಈ ಅಭಿಯಾನ ಕೈಗೊಂಡಿದ್ದು, ಕಳೆದೊಂದು ತಿಂಗಳಿನಿಂದ ಪ್ರಚಾರ ಮಾಡಲಾಗುತ್ತಿದೆ. ಪ್ರಯಾಣಿಕರು ಕಡಿಮೆ ದರದಲ್ಲಿ ಸಂಚರಿಸಲು ಅನುಕೂಲವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಮೆಟ್ರೋ ರೈಲು ನಿಗಮಗಳು ವ್ಯವಸ್ಥೆ ಮಾಡಿಕೊಂಡಿವೆ.

ಬಿಎಂಟಿಸಿ ದೈನಂದಿನ ಪಾಸಿನ ದರ 65 ಆದರೆ, ನಾಳೆ 5 ರೂ. ರಿಯಾಯಿತಿ ನೀಡಲಾಗುತ್ತಿದೆ. ಬಸ್ಸಿನ ಬೇಡಿಕೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೆಚ್ಚುವರಿ ಬಸ್ಸುಗಳು ಕಾರ್ಯಾಚರಣೆ ನಡೆಸಲಿವೆ. ಇದು ಮೊದಲ ಆವೃತ್ತಿಯಾಗಿದ್ದು, ಹೆಚ್ಚುವರಿ ಬಸ್ಸುಗಳನ್ನು ಓಡಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರ ಸ್ಪಂದನೆ ಗಮನಿಸಿ ಮುಂದಿನ ಆವೃತ್ತಿಗೆ ಮತ್ತಷ್ಟು ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಮೆಟ್ರೋ ರೈಲು ಪ್ರಯಾಣಿಕರು ಸಹ  ರಿಯಾಯಿತಿ ದರಲ್ಲಿ  ಸಂಚರಿಸಬಹುದಾಗಿದೆ..ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಶೇಕಡ 15ರ ಬದಲಿಗೆ ಶೇಕಡಾ 25ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯಂತರದ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ರೈಲುಗಳನ್ನು ಓಡಿಸಲಾಗುವುದು ಎಂದು ಅವರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 72 ಲಕ್ಷ ವಾಹನಗಳಿದ್ದು, ಶೇಕಡ.19.4 ರಷ್ಟು ವಾಹನಗಳು ವಾಯುಮಾಲಿನ್ಯ ತಪಾಸಣೆಗೊಳಪಟ್ಟಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹೇಳುತ್ತಾರೆ.

ತಿಂಗಳಲ್ಲಿ ಒಂದು ದಿನವಾದರೂ ಬೆಂಗಳೂರು ಮಹಾನಗರದಲ್ಲಿ ವಾಹನಗಳ ಸಂಖ್ಯೆ ಕಡಿಮೆ ಮಾಡುವ ಮೂಲಕ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಈ ಅಭಿಯಾನ ಆರಂಭಿಸುತ್ತಿದ್ದು, ಪ್ರಯಾಣಿಕರು ಸ್ಪಂದಿಸಬೇಕಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆ? ಸುಳಿವು ಕೊಟ್ಟ ಸಿಎಂ ಡಿಕೆ ಶಿವಕುಮಾರ್!

ವ್ಯವಸ್ಥೆ ಪ್ರಶ್ನೆ ಮಾಡದ 'ಅಂಧಭಕ್ತ'ರ ಬಯಸುತ್ತದೆ, ವಿದ್ಯಾರ್ಥಿಗಳಿಗೆ ಅವರು ವಿರುದ್ಧ: Rahul Gandhi

'UPI ಪಾವತಿ ಸ್ವೀಕರಿಸಲ್ಲ.. ಕ್ಯಾಶ್‌ ಕೊಡಿ': ಅಂಗಡಿಗಳ ಮುಂದೆ ಬೋರ್ಡ್ ಹಾಕಿದ ವ್ಯಾಪಾರಿಗಳು!

ವಂದೇ ಮಾತರಂ ಜಟಾಪಟಿ: ಎರಡೇ ಚರಣ ಗಾಯನಕ್ಕೆ ಶಾಸಕ ಚನ್ನಬಸಪ್ಪ ಆಕ್ಷೇಪ, ಸಿಎಂ ಡಿಕೆ ಶಿವಕುಮಾರ್ ತಿರುಗೇಟು!

ಪತಿಯೊಂದಿಗೆ ಜಗಳ: ಮಗಳು ಸೇರಿದಂತೆ ಇಬ್ಬರು ಮಕ್ಕಳನ್ನು ಬಾವಿಗೆಸದ ಪತ್ನಿ, ಸೋದರಳಿಯ ಸಾವು!