ರಾಜ್ಯ

ಉಪನಗರ ರೈಲು ಯೋಜನೆ: ಭೂ ಸ್ವಾಧೀನಕ್ಕಾಗಿ 2.075 ಕೋಟಿ ರೂ ವೆಚ್ಚ - ಬೆಂಗಳೂರು ವಿಭಾಗೀಯ ರೈಲ್ವೆ ಮ್ಯಾನೇಜರ್

Nagaraja AB

ಬೆಂಗಳೂರು:  161 ಕಿಲೋಮೀಟರ್ ಉದ್ದದ ಉಪನಗರ ಯೋಜನೆಗಾಗಿ ಭೂ ಸ್ವಾಧೀನಕ್ಕಾಗಿ 2 . 075 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ಮ್ಯಾನೇಜರ್  ಆರ್. ಎಸ್. ಸಕ್ಸೇನಾ ಹೇಳಿದ್ದಾರೆ.  

 ಉಪನಗರ ಯೋಜನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಅಥವಾ ನಾಲ್ಕು ತಿಂಗಳೊಳಗೆ ವಿಸ್ತೃತಾ ಯೋಜನಾ ವರದಿ ಸಿದ್ಧಗೊಳ್ಳಲಿದ್ದು, ಭೂ ಸ್ವಾಧೀನ ಪ್ರಕ್ರಿಯೆಯಿಂದಾಗಿ ಯೋಜನೆ ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ರೈಲು ಸಂಚರಿಸಲು 15 ಎಕರೆ ಭೂಮಿ ಅಗತ್ಯವಿದೆ. ಭೂ ಸಂಬಂಧಿತ ಯಾವುದೇ ವಿವಾದ ಇಲ್ಲ , ನಾಲ್ಕು ತಿಂಗಳೊಳಗೆ ವಿಸ್ತೃತಾ ಯೋಜನಾ ವರದಿ ಸಿದ್ಧಪಡಿಸುವಂತೆ ತಿಳಿಸಲಾಗಿದೆ. ದೊಡ್ಡ ಮಟ್ಟದ ಯೋಜನೆ ಆಗಿರುವುದರಿಂದ ಆರು ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

 ಉಪನಗರ ಯೋಜನೆಗಾಗಿ ರೈಲ್ವೆ ಬಜೆಟ್ ನಲ್ಲಿ 17 ಸಾವಿರ ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಇದರಲ್ಲಿ 12,413 ಕೋಟಿಯನ್ನು ಮೂಲಸೌಕರ್ಯಕ್ಕಾಗಿ ವೆಚ್ಚ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯಸರ್ಕಾರಗಳೆರಡೂ ಹಣ ನೀಡಲಿವೆ ಎಂದು ಅವರು ಹೇಳಿದರು.


SCROLL FOR NEXT