ಬೆಂಗಳೂರು: ಪ್ರೀತಿಸಿ ಮದುವೆಯಾಗುವ ದಂಪತಿಗಳಿಗೆ ರಾಜ್ಯ ಸರ್ಕಾರ ರೂ.50 ಸಾವಿರದಿಂದ ರೂ.1 ಲಕ್ಷ ನೀಡಬೇಕೆಂದು ಕನ್ನಡ ಪರ ಸಂಘಟನೆಯ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮಂಗಳವಾರ ಹೇಳಿದ್ದಾರೆ.
ಕುರಿಗಳಿಗೆ ವಿವಾಹ ಮಾಡಿಸುವ ಮೂಲಕ ವಾಟಾಳ್ ನಾಗರಾಜ್ ಅವರು ಪ್ರೇಮಿಗಳ ದಿನಾಚರಣೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನಾಚರಣೆಗೆ) ನಾವು ವಿರೋಧ ವ್ಯಕ್ತಪಡಿಸಬಾರದು. ಪ್ರೀತಿ ಯಾವುದೇ ಸಮುದಾಯ ಅಥವಾ ಜಾತಿಗೆ ಸಂಬಂಧಿಸಿದ್ದಲ್ಲ. ಪ್ರೇಮಿಗಳ ದಿನಾಚರಣೆಗಾಗಿ ಕೇಂದ್ರ ಸರ್ಕಾರ ಒಂದು ದಿನ ರಜೆ ಘೋಷಣೆ ಮಾಡಬೇಕು. ಪ್ರೀತಿ ವಿವಾಹವಾಗುವ ದಂಪತಿಗಳಿಗೆ ರಾಜ್ಯ ಸರ್ಕಾರ ರೂ.50,000 ದಿಂದ ರೂ.1 ಲಕ್ಷ ನೀಡಬೇಕೆಂದು ತಿಳಿಸಿದ್ದಾರೆ.