ರಾಜ್ಯ

ಕೇವಲ 15 ನಿಮಿಷದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಚಾರ!

Shilpa D
ಬೆಂಗಳೂರು: ಇನ್ನು ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ಕೇವಲ 15 ನಿಮಿಷಗಳಲ್ಲಿ ಸಂಚರಿಸಬಹುದು, ಬಹು ನಿರೀಕ್ಷಿತ ಹೆಲಿ ಟ್ಯಾಕ್ಸಿ ಸರ್ವೀಸ್ ಇದೇ ಫೆಬ್ರವರಿ 21 ರಿಂದ ಜಾರಿಯಾಗಲಿದೆ.
ಇದು ಒನ್ ವೇ ಟ್ರಿಪ್ ಆಗಿದ್ದು, ಕೇವಲ 15 ನಿಮಿಷಗಳಲ್ಲಿ ಎಲೆಕ್ಟ್ರಾನಿಕ್ ಸಿಟಿ ತಲುಪಬಹುದಾಗಿದೆ. ಇನ್ನೂ ಈ ಸೇವೆಗೆ ದರ ನಿಗದಿಯಾಗಿಲ್ಲ, ಅಂದಾಜು ಸುಮಾರು 3,500 ರು ವೆಚ್ಚ ತಗುಲಬಹುದು. 
ಈ ಸೇವೆಗಾಗಿ ಬೆಂಗಳೂರು ನಗರದಲ್ಲಿ ಸುಮಾರು 90 ಹೆಲಿಪ್ಯಾಡ್ ಗಳಿವೆ ಎಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಹರಿ ಮರರ್ ಹೇಳಿದ್ದಾರೆ,
ಹೆಲಿ ಟ್ಯಾಕ್ಸಿ ಸೇವೆ ಬಳಸಲು ಬಯಸುವ ಪ್ರಯಾಣಿಕರು ಟರ್ಮಿನಲ್ ನಿಂದ ಟೇಕಾಫ್ ಪ್ರದೇಶಕ್ಕೆ ಕಾರಿನಲ್ಲಿ ತೆರಳಬೇಕಾಗುತ್ತದೆ. ಈ ಸೇವೆಯನ್ನು ತುಂಬಿ ಏವಿಯೇಶನ್ ಗ್ರೂಪ್ ನ ನಿವೃತ್ತ ಕ್ಯಾಪ್ಟನ್ ಕೆಎನ್ ಜಿ ನಾಯಕ್ ಉದ್ಘಾಟಿಸಲಿದ್ದು, ಪ್ರಯಾಣದರ ಹಾಗೂ ಸಂಚಾರದ ವೇಳಾಪಟ್ಟಿಯನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಂದಿನ ಆರು ತಿಂಗಳಲ್ಲಿ  ಈ ಸೇವೆ ಬಯಸುವ ಪ್ರಯಾಣಕರಿಗೆ ಆಧಾರ್ ಕಾರ್ಡ್ ಆದಾರದ ಮೇಲೆ ಪರಿಶೀಲನೆ ನಡೆಸಲಾಗುವುದು. ಬಯೋಮೆಟ್ರಿಕ್ ಆಧಾರ್ ಮೂಲಕ ಅವರನ್ನು ಗುರುತು ಹಚ್ಚಲಿದೆ. ವಿಮಾನ ಟಿಕೆಟ್ ಬುಕ್ ಆದ ನಂತರ ಈ ಸೇವಾ ಸೌಲಭ್ಯ ಪಡೆಯಬಹುದಾಗಿದೆ.
ಒಮ್ಮೆ ಬಯೋಮೆಟ್ರಿಕ್ ಬಳಸಿದ ಮೇಲೆ ಸ್ಯ್ಕಾನರ್ ಗಳು ಮುಖವನ್ನು ಗುರುತಿಸಿದ ನಂತರ ಗೇಟ್ ತೆಗೆಯಲಾಗುತ್ತದೆ, ಅನಂತರ ವಿಮಾನ ನಿಲ್ದಾಣದ  ಮೂಲಕ ತೆರಳಬಹುದು.
ಬಿಐಎಎಲ್ ಬಿಎಂಟಿಸಿ ಜೊತೆ ಕರ್ತವ್ಯ ನಿರ್ವಹಿಸುತ್ತಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಾಯು ವಜ್ರ ಬಸ್ ಸೇವೆ ಹೊಂದಿದೆ. ಪ್ರಯಾಣಿಕರು ತಮಮ್ ಬೋರ್ಡಿಂಗ್ ಪಾಸ್ ಮತ್ತು ಲಗ್ಗೇಜ್ ಅನ್ನು ಬಸ್ ನಲ್ಲಿ ತರಬಹುದಾಗಿದೆ. ಈ ಸೇವೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ. ಸದ್ಯ ಕೆಲ ವಾಯು ವಜ್ರ ಬಸ್ ಗಳಲ್ಲಿ ವಿಮಾನ ಸಂಚಾರದ ಸಮಯವನ್ನು ಪ್ರದರ್ಶಿಸಲಾಗುತ್ತಿದೆ. 
SCROLL FOR NEXT