ರಾಜ್ಯ

ಕರ್ನಾಟಕ ವಿಧಾನಸಭೆ ಚುನಾವಣೆ: ನಾಮಪತ್ರದೊಡನೆ ಆದಾಯ ಮೂಲಗಳ ವಿವರ ನೀಡುವುದು ಕಡ್ಡಾಯ

Raghavendra Adiga
ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಆದೇಶದ ಅನುಸಾರ ತಮ್ಮ ಆದಾಯ  ಮೂಲಗಳನ್ನು ಬಹಿರಂಗಪಡಿಸಬೇಕು ಎಂದು  ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
"ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎಲ್ಲ ಅಭ್ಯರ್ಥಿಗಳು ತಮ್ಮ ಆದಾಯ ಮತ್ತು ಆಸ್ತಿಗಳ ಮೂಲಗಳನ್ನು ಅವರ ಸಂಗಾತಿಗಳು ಮತ್ತು ಅವಲಂಬಿತರ ಆಸ್ತಿ ವಿವರಗಳನ್ನು ಸರ್ವೋಚ್ಚ ನ್ಯಾಆಲಯ ಆದೇಶದಂತೆ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಬಹಿರಂಗಪಡಿಸಬೇಕು". ಚುನಾವಣಾ ಅಧಿಕಾರಿಗಳು ಐಎಎನ್ ಎಸ್ ಗೆ ಹೇಳಿದ್ದಾರೆ
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಹೆಸರಿನ ಆಸ್ತಿ, ಆದಾಯದ ಮೂಲವನ್ನು ಬಹಿರಂಗಗೊಳಿಸಬೇಕು, ತಮ್ಮ ಸಂಗಾತಿ ಹಾಗೂ ಅವಲಂಬಿತರ ಆದಾಯವನ್ನೂ ಬಹಿರರಂಗಪಡಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಕಳೆದ ಶುಕ್ರವಾರದಂದು ಆದೇಶಿಸಿತ್ತು.
ಇದೇ ಬರುವ ಏಪ್ರಿಲ್-ಮೇ ತಿಂಗಳಿನಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ.  
SCROLL FOR NEXT