ಒಡೆಯರ್ ಫೌಂಡೇಶನ್ ಉದ್ಘಾಟನಾ ಸಮಾರಂಭದಲ್ಲಿ ರಾಣಿ ಪ್ರಮೋದಾ ದೇವಿ 
ರಾಜ್ಯ

ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಫೌಂಡೇಶನ್ ಉದ್ಘಾಟನೆ

: ದಿವಂಗತ ನರಸಿಂಹ ರಾಜ ಒಡೆಯರ್ ಅವರ ಧ್ಯೇಯೋದ್ದೇಶಗಳನ್ನು ಈಡೇರಿಸುವ ಉದ್ದೇಶದಿಂದ ಶ್ರೀಕಂಠದತ್ತ ಒಡೆಯರ್‌ ಫೌಂಡೇಶನ್‌ ಅನ್ನು ...

ಬೆಂಗಳೂರು: ದಿವಂಗತ ನರಸಿಂಹ ರಾಜ ಒಡೆಯರ್ ಅವರ ಧ್ಯೇಯೋದ್ದೇಶಗಳನ್ನು ಈಡೇರಿಸುವ ಉದ್ದೇಶದಿಂದ ಶ್ರೀಕಂಠದತ್ತ ಒಡೆಯರ್‌ ಫೌಂಡೇಶನ್‌ ಅನ್ನು ಉದ್ಘಾಟಿಸಲಾಯಿತು. 
ಮಹಾರಾಜ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ಅವರ 65ನೇ ಹುಟ್ಟುಹಬ್ಬದ ಅಂಗವಾಗಿ ಸೋಮವಾರ ವಸಂತನಗರದಲ್ಲಿರುವ ಬೆಂಗಳೂರು ಅರಮನೆ ಆವರಣದಲ್ಲಿ  ಶ್ರೀಕಂಠದತ್ತ ಒಡೆಯರ್‌ ಫೌಂಡೇಶನ್‌ ಗೆ ಚಾಲನೆ ನೀಡಲಾಯಿತು. 
ಈ ವೇಳೆ ಮಾತನಾಡಿದ  ರಾಣಿ ಪ್ರಮೋದಾದೇವಿ ಫೌಂಡೇಷನ್‌ ಧ್ಯೇಯೋದ್ದೇಶವನ್ನು ವಿವರಿಸಿದರು. ಶ್ರೀಕಂಠ ದತ್ತ ಒಡೆಯರ್‌ ಅವರು ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಮಾಡಿರುವ ಕಾರ್ಯವನ್ನೇ ಈ ಫೌಂಡೇಷನ್‌ ಮೂಲಕ ಮುಂದುವರಿಸಿಕೊಂಡು ಹೋಗಲಾಗುವುದು ಹಾಗೂ ಮೈಸೂರಿನಲ್ಲಿ "ಕಲೆ ಸಂರಕ್ಷಣಾ ಕೇಂದ್ರ' ತೆರೆಯಲಾಗುವುದು  ಎಂದರು.
ಕಲೆ, ಪರಂಪರೆ ಹಾಗೂ ಕರಕುಶಲತೆಯನ್ನು ಉಳಿಸಿ, ಬೆಳೆಸುವ ಜತೆಗೆ ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಮೈಸೂರಿನಲ್ಲಿ ಕಲೆ ಸಂರಕ್ಷಣಾ ಕೇಂದ್ರವನ್ನು ತೆರೆಯಲಾಗುತ್ತದೆ. ಟ್ರನ್ಸ್‌ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಪಾರಂಪರಿಕ ಶ್ರೇಷ್ಠತಾ ಕೇಂದ್ರವನ್ನು ಆರಂಭಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಒಡೆಯರ್‌ ಕ್ರಿಕೆಟ್‌,  ಕುದುರೆ ಓಟ ಸೇರಿದಂತೆ ವಿವಿಧ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ದೇಶಿಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಹಲವು ಕಾರ್ಯಕ್ರಮವನ್ನು ಹಾಕಿಕೊಂಡಿದ್ದರು. ಮೈಸೂರಿನ ಜಗನ್‌ಮೋಹನ್‌ ಅರಮನೆಯನ್ನು ನವೀಕರಿಸುವ ಕಾರ್ಯವನ್ನು ಆರಂಭಿಸಿದ್ದರು. ಅದನ್ನು ಈಗ ಪೂರ್ಣಗೊಳಿಸಲಾಗಿದೆ ಎಂದರು.
ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗ್ಡೆ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆಯ ಜತೆಗೆ ಜನರ ಮಾನಸಿಕತೆಯನ್ನು ಬದಲಿಸುವ ಅಗತ್ಯವಿದೆ. ಬದ್ಧತೆ ಮತ್ತು ಪ್ರಮಾಣಿಕತೆ ಹೊಂದಿರುವ ವ್ಯಕ್ತಿಯನ್ನು ಜನ ನಂಬುವುದಿಲ್ಲ. ಸಮಾಜ ಪರಿವತರ್ಯನೆಯ ದೃಷ್ಟಿಯಿಂದಲ್ಲೂ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ದಿ.ಶ್ರೀಕಂಠದತ್ತ ಒಡೆಯರ್‌ ಅವರ ಸಹೋದರಿಯರಾದ ಮಹಾರಾಜಕುಮಾರಿ ಕಾಮಾಕ್ಷಿ ದೇವಿ, ಮಹಾರಾಜಕುಮಾರಿ ಇಂದ್ರಾಕ್ಷಿ ದೇವಿ ಹಾಗೂ ಮಹಾರಾಜಕುಮಾರಿ ವಿಶಾಲಾಕ್ಷಿದೇವಿ ಮತ್ತು  ಸ್ನೇಹಿತ ಡಾ.ರಫಿಕ್‌ ಅಹ್ಮದ್‌ ಶ್ರೀಕಂಠ ದತ್ತ ಒಡೆಯರ್‌ ಅವರೊಂದಿಗಿನ ಒಡನಾಟ ಮತ್ತು ಸುಮಧುರ ಕ್ಷಣಗಳನ್ನು ನೆನಪಿಸಿಕೊಂಡರು.
ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ, ಟ್ರನ್ಸ್‌ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಕುಲಪತಿ ಡಾ. ದರ್ಶನ್‌ ಶಂಕರ್‌, ಮೊದಲಾದವರು ಉಪಸ್ಥಿತರಿದ್ದರು. 
  • ಫೌಂಡೇಶನ್ ನ ಪ್ರಧಾನ ತತ್ವ ಹಾಗೂ ಉದ್ದೇಶಗಳು 
  • ಕಲೆ, ಪರಂಪರೆ ಹಾಗೂ ಕರಕುಶಲತೆಯನ್ನು ಉತ್ತೇಜನ
  • ಪರಂಪರೆ ಉತ್ತೇಜನಕ್ಕಾಗಿ ಹಣ ಸಂಗ್ರಹ
  • ವಸ್ತು ಸಂಗ್ರಹಾಲಯ, ಕಲಾ ಗ್ಯಾಲರಿ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ
  • ಬಡ ಹಳ್ಳಿಗರಿಗೆ ವೈದ್ಯಕೀಯ ಸೇವೆ
  • ಕ್ರೀಡೆಗೆ ಉತ್ತೇಜನ, ಕ್ರೀಡಾಂಗಣಗಳ ನಿರ್ವಹಣೆ, ಉದ್ಯಾನವನಗಳು, ವಿದ್ಯಾರ್ಥಿ ವೇತನ,ಪರಿಸರ ಸಂರಕ್ಷಣೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!

ಸರ್ಕಾರ ಕೇವಲ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ: ದೆಹಲಿ ದಮನಕಾರಿ ಕ್ರಮ ಬೆಂಬಲಿಸಿದ ಸಚಿವ ಪ್ರಹ್ಲಾದ್ ಜೋಶಿ

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ