ರಾಜ್ಯ

ಗೂಂಡಾಗಿರಿ ಪ್ರಕರಣ: ಶಾಸಕನ ಪುತ್ರ ನಲಪಾಡ್ ವಿಚಾರಣಾಧೀನ ಕೈದಿ ಸಂಖ್ಯೆ 1756

Manjula VN
ಬೆಂಗಳೂರು; ಯುಬಿ ಸಿಟಿಯ ಕೆಫೆಯೊಂದರಲ್ಲಿ ಉದ್ಯಮಿ ಪುತ್ರನ ಮೇಲೆ ಗೂಂಡಾಗಿರಿ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್'ಗೆ ವಿಚಾರಣಾಧೀನ ಕೈದಿ 1756 ಸಂಖ್ಯೆಯನ್ನು ಕೇಂದ್ರೀಯ ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳು ನೀಡಿದ್ದಾರೆ. 
ಗೂಂಡಾಗಿರಿ ಪ್ರಕರಣದಲ್ಲಿ ಬಂಧಿತರಾಗಿದ್ದ ಶಾಸರ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹಾಗೂ ಆತನ 7 ಮಂದಿ ಸಹಚರರು ನಿನ್ನೆಯಷ್ಟೇ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಸೇರಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿಗೆ ಬಂದ ನಲಪಾಡ್'ಗೆ ಕಾರಾಗೃಹದ ಅಧಿಕಾರಿಗಳು ವಿಚಾರಣಾಧೀನ ಕೈದಿ 1756 ಸಂಖಿಯೆಯನ್ನು ನೀಡಿದ್ದು, ನಂತರ ವಿಶೇಷ ಭದ್ರತಾ ವಿಭಾಗದ ಸೆಲ್ ನಲ್ಲಿ ಆತನನ್ನು ಬಂಧಿಸಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 
ಪ್ರಕರಣ ಸಂಬಂಧ ವಿದ್ವತ್ ತಂದೆ ಲೋಕನಾಥನ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವೊಂದನ್ನು ಬರೆದಿದ್ದು, ಪ್ರಕರಣದ ಸಂಬಂಧ ವಕೀಲ ಶ್ಯಾಮ್'ಸುಂದರ್ ಎಂ.ಎಸ್ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಮನವಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ. 
SCROLL FOR NEXT