ಮಂಡ್ಯ: ಶಾಸಕ, ರೈತ ಮುಖಂಡ ಪುಟ್ಟಣ್ಣಯ್ಯ ಅವರ ಅಗಲಿಕೆಯ ನೋವಿನಿಂದ ಅವರ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕ್ಯಾತನಹಳ್ಳಿ ಗ್ರಾಮದ ಚಂದು(27) ಮಹದೇಶ್ವರ ದೇವಸ್ಥಾನದ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತ ಚಂದು ಅವರು ಪುಟ್ಟಣ್ಣಯ್ಯ ಅವರ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ. ಅವರೊಂದಿಗೆ ಪಗಡೆ ಆಟವಾಡುತ್ತಿದ್ದರು..
ಭಾನುವಾರ ತೀವ್ರ ಹೃದಯಾಘಾತದಿಂದ ಮೃತಪಟ್ಟ ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದ್ದು, ಪಾರ್ಥಿವ ಶರೀರವನ್ನು ಶ್ರೀರಂಗಪಟ್ಟಣದಿಂದ ಬೈಕ್ ರ್ಯಾಲಿ, ಮೆರವಣಿಗೆ ಮೂಲಕ ಪಾಂಡವಪುರಕ್ಕೆ ತರಲಾಗುತ್ತಿದೆ.
ಪುಟ್ಟಣ್ಣಯ್ಯ ಅವರು ಹುಟ್ಟೂರು ಕ್ಯಾತನಹಳ್ಳಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು. ಮೌಢ್ಯ ವಿರೋಧಿಸುತ್ತಿದ್ದ ಪುಟ್ಟಣ್ಣಯ್ಯ ಅಂತ್ಯಕ್ರಿಯೆಯನ್ನು ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.