ಬೆಂಗಳೂರು: ಮಾದಕದ್ರವ್ಯ ನಿಯಂತ್ರಣ ವಿಭಾಗದ (ಎನ್ ಸಿಬಿ) ಅಧಿಕಾರಿಗಳು ಯುವಕನೊಬ್ಬನನ್ನು ಬಂಧಿಸಿ 28.060 ಕೆಜಿ ತೂಕದ ಗಾಂಜಾವನ್ನು ಮೈಸೂರು ರಸ್ತೆಯ ಮೈಲಸಂದ್ರ ಗೇಟ್ ಬಳಿ ವಶಪಡಿಸಿಕೊಂಡಿದ್ದಾರೆ.
ನಿಖರ ಮಾಹಿತಿ ಪಡೆದ ಅಧಿಕಾರಿಗಳು ಮೈಲಸಂದ್ರ ಗೇಟ್ ಬಳಿ ಆರೋಪಿಯನ್ನು ಬಂಧಿಸಿದರು. ವಶಪಡಿಸಿಕೊಂಡ ಗಾಂಜಾವನ್ನು ಆಂಧ್ರಪ್ರದೇಶದಿಂದ ತರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಯೋಜಿಸಿದ್ದರು ಎಂದು ಹೇಳಲಾಗುತ್ತಿದೆ. ಎನ್ ಡಿಪಿಎಸ್ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಆರೋಪಿ ಯುವಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.