ರಾಜ್ಯ

ಹೊನ್ನಾವರ ಸ್ಫೋಟ ಪ್ರಕರಣ: ಸ್ಥಳದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ

Manjula VN
ಹೊನ್ನಾವರ; ಹೊನ್ನಾವರದ ಹೊಸಾಡ್ ನಲ್ಲಿ ಶಾಸಕ ಮಂಕಾಳ ವೈದ್ಯ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಘಟನಾ ಸ್ಥಳದಲ್ಲಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿದೆ ಎಂದು ಬುಧವಾರ ತಿಳಿದುಬಂದಿದೆ. 
ಭಾನುವಾರ ನಡೆದ ಕಾರ್ಯಕ್ರಮವೊಂದರ ವೇದಿಕೆಯ ಸಮೀಪವೇ ಶಾಸಕರನ್ನೇ ಗುರಿಯಾಗಿರಿಸಿಕೊಂಡು ವ್ಯಕ್ತಿಯೊಬ್ಬ ಬಾಂಬ್ ಎಸೆಯಲು ಯತ್ನ ನಡೆಸುತ್ತಿದ್ದ ಸಂದರ್ಭದಲ್ಲಿ ಆತನ ಕೈಯಲ್ಲಿಯೇ ಬಾಂಬ್ ಸ್ಫೋಟಗೊಂಡಿತ್ತು.
ಪ್ರಕರಣ ಕುರಿತು ಸ್ಥಳ ಪರೀಶೀಲನೆಗೆ ತೆರಳಿದ ತನಿಖಾ ತಂಡಕ್ಕೆ ಅನುಮಾನಾಸ್ಪದ ವಸ್ತುವೊಂದು ದೊರಕಿದ್ದು, ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಈ ನಡುವೆ ಮಂಗಳವಾರ ಪೊಲೀಸರು ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ. 
ಅನುಮಾನಾಸ್ಪದ ವಸ್ತು ಪತ್ತೆಯಾಗಿರುವುದನ್ನು ಉತ್ತರಕನ್ನಡ ಜಿಲ್ಲೆಯ ಎಸ್'ಪಿ ವಿನಾಯಕ್ ಪಾಟೀಲ್ ಅವರು ದೃಢಪಡಿಸಿದ್ದು, ಎಫ್ಎಸ್ಎಲ್ ತಜ್ಞರಿಗೆ ಅನುಮಾನಾಸ್ಪದ ವಸ್ತು ದೊರಕಿದ್ದು, ವಸ್ತುವನ್ನು ತೆಗೆದು ನೋಡಲು ನ್ಯಾಯಾಲಯದ ಅನುಮತಿಯನ್ನು ಕೇಳಲಾಗಿದೆ. ನ್ಯಾಯಾಲಯ ಅನುಮತಿ ನೀಡುತ್ತಿದ್ದಂತೆಯೇ ಪರಿಶೀಲನೆ ನಡೆಸಲಾಗುತ್ತಿದೆ. ಅಧಿಕಾರಿಗಳು ಈಗಾಗಲೇ ಘಟನಾ ಸ್ಥಳದಲ್ಲಿದ್ದ ರಕ್ತದ ಮಾದರಿ ಹಾಗೂ ಬಟ್ಟೆಗಳ ತುಂಡುಗಳು ಹಾಗೂ ಇನ್ನಿತರೆ ವಸ್ತುಗಳನ್ನು ತೆಗೆದುಕೊಂಡಿದ್ದು ಪರಿಶೀಲನೆ ನಡೆಸಲಾಗುತ್ತಿದ್ದಾರೆಂದು ಹೇಳಿದ್ದಾರೆ. 
SCROLL FOR NEXT