ಭಾರತೀಯ ಸೇನೆ 
ರಾಜ್ಯ

ನಾಪತ್ತೆಯಾಗಿದ್ದ ಯೋಧನ ಪತ್ನಿಯ 37 ವರ್ಷಗಳ ಸುದೀರ್ಘ ಹೋರಾಟಕ್ಕೆ ಕೊನೆಗೂ ಸಿಕ್ತು ಫಲ!

ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತಿ ನಾಪತ್ತೆಯಾಗಿದ್ದರಿಂದ ನಿವೃತ್ತಿ ಸೌಲಭ್ಯಕ್ಕಾಗಿ ಕಳೆದ 37 ವರ್ಷಗಳಿಂದ ಹೋರಾಟ ನಡೆಸುತ್ತಿದ್ದ 67 ವರ್ಷದ...

ಮಡಿಕೇರಿ: ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತಿ ನಾಪತ್ತೆಯಾಗಿದ್ದರಿಂದ ನಿವೃತ್ತಿ ಸೌಲಭ್ಯಕ್ಕಾಗಿ ಕಳೆದ 37 ವರ್ಷಗಳಿಂದ ಹೋರಾಟ ನಡೆಸುತ್ತಿದ್ದ 67 ವರ್ಷದ ನಂಜಮ್ಮ ಅವರಿಗೆ ಕೊನೆಗೂ ನ್ಯಾಯ ಸಿಕ್ಕಿದೆ. 
ಭಾರತೀಯ ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಯೋಧ ತೆಕ್ಕಡ ಯು ಬಾಲಕೃಷ್ಣ ಅವರು 1981ರಲ್ಲಿ ನಾಪತ್ತೆಯಾಗಿದ್ದರು. ಮಡಿಕೇರಿಯ ಭಾಗಮಂಡಲದ ಸಿಂಗತ್ತೂರ್ ಗ್ರಾಮದಲ್ಲಿ ಅಂಗವಿಕಲ ಸಹೋದರಿಯೊಂದಿಗೆ ನಂಜಮ್ಮ ವಾಸವಾಗಿದ್ದು ಪತಿ ನಾಪತ್ತೆಯಾಗಿದ್ದರಿಂದ ನಿವೃತ್ತಿ ಸೌಲಭ್ಯ ಪಡೆಯುವ ಸಲುವಾಗಿ ಸುದೀರ್ಘ ಹೋರಾಟವನ್ನು ನಡೆಸಿಕೊಂಡು ಬಂದಿದ್ದು ಇದೀಗ ಕೊನೆಗೂ ಅವರ ಹೋರಾಟಕ್ಕೆ ಫಲ ಸಿಕ್ಕಿದೆ. 
ನಂಜಮ್ಮ ಅವರ ಪತಿ ತೆಕ್ಕಡ ಯು ಬಾಲಕೃಷ್ಣ ಅವರು 1962ರಲ್ಲಿ ಸೇನೆಗೆ ಸೇರಿದ್ದರು. 1981ರ ಮೇ ತಿಂಗಳಲ್ಲಿ ಒಂದು ತಿಂಗಳ ರಜೆಯಲ್ಲಿ ಬಾಲಕೃಷ್ಣ ಅವರು ಬಂದಿದ್ದರು. ರಜೆ ಮುಗಿದು ಜೂನ್ 16ರಂದು ಕೆಲಸಕ್ಕೆ ಹೋಗಬೇಕು ಎಂದು ಜೂನ್ 12ರಂದೇ ಅವರು ಮನೆಯಿಂದ ಹೊರಟು ಹೋಗಿದ್ದರು. ಬಳಿಕ ಭಾರತೀಯ ಸೇನೆಯಿಂದ ಪತ್ರವೊಂದು ಬಂದಿದ್ದು ಕಳೆದ ಮೂರು ತಿಂಗಳಿನಿಂದ ಬಾಲಕೃಷ್ಣ ಅವರು ಕೆಲಸಕ್ಕೆ ಬಂದಿಲ್ಲ ಅಂತ. ಕೂಡಲೇ ನಾನು ಕೆಲವೆಡೆ ಹುಡುಕಿ ಸಾಕಾಗಿ ಕೊನೆಗೆ ಕೊಡಗು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. 
ಎಷ್ಟೇ ಹುಡುಕಿದರು ಬಾಲಕೃಷ್ಣ ಅವರು ಪತ್ತೆಯಾಗಲಿಲ್ಲ. ಮೂರು ವರ್ಷಗಳ ಬಳಿಕ ಸೇನೆಯಿಂದ ನಂಜಮ್ಮ ಅವರು ಪತ್ರವೊಂದನ್ನು ಸ್ವೀಕರಿಸಿದ್ದರು. ಅದರಲ್ಲಿ ಬಾಲಕೃಷ್ಣ ಅವರು ಡ್ಯೂಟಿ ರಿಪೋಟ್ ಮಾಡಿಕೊಳ್ಳಲಿಲ್ಲ ಜತೆಗೆ ರಜೆಗಾಗಿ ಯಾವುದೆ ರೀತಿಯ ಮನವಿಯನ್ನು ಮಾಡದ ಕಾರಣ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಇದಾದ 11 ವರ್ಷಗಳ ಬಳಿಕ ಮತ್ತೆ ಸೇನೆಯಿಂದ ಮತ್ತೊಂದು ಪತ್ರ ಬಂದಿದ್ದು ಬಾಲಕೃಷ್ಣ ಅವರು ನಾಪತ್ತೆಯಾಗಿರುವುದರಿಂದ ಅವರಿಗೆ ನಿವೃತ್ತಿ ಸೌಲಭ್ಯಗಳನ್ನು ನೀಡಲಾಗುವುದಿಲ್ಲ ಎಂದು ತಿಳಿಸಲಾಗಿತ್ತು. ನಂತರ ಹಲವು ಬಾರಿ ನಿವೃತ್ತಿ ವೇತನಕ್ಕಾಗಿ ಎಷ್ಟು ಪ್ರಯತ್ನಿಸಿದ್ದರು ನಂಜಮ್ಮ ಅವರ ಪ್ರಯತ್ನಗಳು ವಿಫಲವಾಗಿದ್ದವು. 
2014ರಲ್ಲಿ ನಂಜಮ್ಮ ಅವರು ನಿವೃತ್ತ ಮೇಜರ್ ಪಿಎಸ್ ಚಿನ್ನಪ್ಪ ಅವರನ್ನು ಭೇಟಿ ಮಾಡಿ ವಕೀಲರ ಮೂಲಕ ಜೆಎಂಎಫ್ಸಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೊನೆಗೆ ಕೋರ್ಟ್ ನಂಜಮ್ಮ ಪರವಾಗಿ ಆದೇಶ ನೀಡಿದ್ದು ಯಾವುದೇ ಒಬ್ಬ ಮನುಷ್ಯ ಏಳು ವರ್ಷಗಳ ಕಾಲ ನಾಪತ್ತೆಯಾಗಿದ್ದರೆ ಅವರದ್ದು ಸಾವು ಎಂದು ಘೋಷಿಸಬೇಕು ಎಂದು ಹೇಳಿತ್ತು. 
ನಂತರ ಚಿನ್ನಪ್ಪ ಅವರು ಬಾಲಕೃಷ್ಣ ಅವರ ಸೇವಾ ದಾಖಲೆಗಳು ಮತ್ತು ಕೋರ್ಟ್ ಆದೇಶವನ್ನು ಸೇನಾ ಕೇಂದ್ರ ಕಚೇರಿಗೆ ಕಳುಹಿಸಿದ್ದು ನಂಜಮ್ಮ ಅವರಿಗೆ ನಿವೃತ್ತಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು. ಇದರ ಜತೆಗೆ 2016ರಲ್ಲಿ ಜನರಲ್ ದಲ್ಬೀರ್ ಸಿಂಗ್ ಅವರು ಮಡಿಕೇರಿಗೆ ಭೇಟಿ ನೀಡಿದ್ದಾಗ ಚಿನ್ನಪ್ಪ ಅವರು ನಂಜಮ್ಮ ಅವರ ಪರಿಸ್ಥಿತಿಯನ್ನು ವಿವರಿಸಿ ನಿವೃತ್ತಿ ಸೌಲಭ್ಯಗಳು ಸಿಗುವಂತೆ ಮಾಡಿ ಎಂದು ಮನವಿ ಮಾಡಿದ್ದರು. ಇದಾದ ಒಂದು ತಿಂಗಳ ಬಳಿಕ ಸೇನೆ ನಂಜಮ್ಮ ಅವರ ಬ್ಯಾಂಕ್ ಖಾತೆಗೆ ನಿವೃತ್ತಿ ಸೌಲಭ್ಯದ ಸಂಪೂರ್ಣ ಹಣವನ್ನು ಜಮೆ ಮಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್