ರಾಜ್ಯ

ಟೆಕ್ಕಿ ನಾಪತ್ತೆ ಪ್ರಕರಣ: ಒಎಲ್ ಎಕ್ಸ್ ಮುಖ್ಯಸ್ಥರ ವಿರುದ್ಧ ಕ್ರಮ; ಪೋಲೀಸ್ ಎಚ್ಚರಿಕೆ

Raghavendra Adiga
ಬೆಂಗಳೂರು: ಒಎಲ್ ಎಕ್ಸ್ ನಲ್ಲಿ ಕಾರು ಮಾರಾಟಕ್ಕೆ ತೊಡಗಿದ್ದ ಪಾಟ್ನಾ ಮೂಲದ ಟೆಕ್ಕಿಯೊಬ್ಬರು ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದು ಇದಾಗಲೇ ಹದಿನೈದು ದಿನಗಳು ಕಳೆದಿದೆ.
ಕುಮಾರ್ ಅಜಿತಾಬ್ (30) ಎನ್ನುವ ಟೆಕ್ಕಿ ನಾಪತ್ತೆ ಪ್ರಕರಣ ಪೋಲೀಸರಿಗೆ ಸವಾಲಾಗಿದೆ. ಇದೀಗ ಪೋಲೀಸರು ಟೆಕ್ಕಿ ನಾಪತ್ತೆ ಸಂಬಂಧ ಒಎಲ್ ಎಕ್ಸ್ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ. ಡಿಸಿಪಿ (ವೈಟ್ ಫೀಲ್ಡ್) ಅಬ್ದುಲ್ ಅಹಾದ್ ಒಎಎಲ್ಎಕ್ಸ್ ಇಂಡಿಯಾ ವಿಭಾಗದ ಸಂಸ್ಥಾಒಪಕ ಅಮರ್ ಜಿತ್ ಸಿಂಗ್ ಭಾತ್ರಾ ಗೆ ಟ್ವೀಟ್ ಮಾಡಿದ್ದು ಸಂಸ್ಥೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ
ಪ್ರಕರಣದ ವಿವರಗಳನ್ನು ಒಳಗೊಂಡಂತೆ ಪೋಲೀಸರು  ಡಿಸೆಂಬರ್ 22 ರಂದು  ಈಮೇಲ್ ಒಂದನ್ನು ಸಂಸ್ಥೆಗೆ ರವಾನಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಇದಾಗಿ ಸಂಸ್ಥೆಗೆ ಕಳಿಸಿದ ಸಂದೇಶಕ್ಕೆ ಯಾವ ಪ್ರತಿಕ್ರಿಯೆ ಬಂದಿಲ್ಲ. ಸಿಬ್ಬಂದಿಗೆ ಕರೆ ಮಾಡಿದಾಗಲೂ ಸೂಕ್ತ ಪ್ರತಿಕ್ರಿಯೆ ದೊರಕಿಲ್ಲ ಆದ ಕಾರಣ ಪೋಲೀಅಸರು ಸಾಮಾಜಿಕ ತಾಣದ ಸಹಕಾರದೊಡನೆ ಈ ಪ್ರಕರಣ ಬೇಧಿಸಲು ಸಜ್ಜಾದರು. ಟೆಕ್ಕಿ ಪತ್ತೆಗೆ ಒಎಲ್ ಎಕ್ಸ್ ಸಹಕಾರ ನೀಡುತ್ತಿಲ್ಲ ಎನ್ನುವ ಟ್ವೀಟ್ ವೈರಲ್ ಆಗಿದ್ದು ಹಲವಾರು ಜನ ಈ ಪ್ರಕರಣವನ್ನು ಬಗೆಹರಿಸಲು ತಾವು ಸಹ ಟ್ವೀಟ್ ನ್ನು ಹಂಚಿಕೊಂಡಿದ್ದಾರೆ.
"ಟ್ವಿಟ್ಟರ್ ಅಭಿಯಾನದ ಬಳಿಕ ಕಾನೂನು ಸಲಹಾ ತಂಡ ಮತ್ತು ಒಎಲ್ ಎಕ್ಸ್ ನ ಪ್ರತಿನಿಧಿಗಳು ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ತನಿಖೆಗಳಿಗೆ ಸಹಕಾರ ನೀಡುವ ಭರವಸೆ ನಿಡಿದ್ದಾರೆ" ಡಿಸಿಪಿ ಅಹಾದ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಪ್ರಕರಣ ಬಹಳ ಸಂಕೀರ್ಣವಾಗಿದ್ದು ಈ ಘಟನೆಯ ಹಿಂದಿನ ಉದ್ದೇಶವು ಸ್ಪಷ್ಟವಾಗಿಲ್ಲಾ. ಈ ವೇಳೆ ಅಜಿತಾಬ್ ತಂದೆ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದಾರೆ.
SCROLL FOR NEXT