ರಾಜ್ಯ

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ: ಸಮತೋಲನ ಕಾಯ್ದುಕೊಳ್ಳಲು ಹೈ ಕೋರ್ಟ್ ಸೂಚನೆ

Raghavendra Adiga
ಬೆಂಗಳೂರು: ಉತ್ತರ ಕರ್ನಾಟಕದ ಪ್ರಬಲ ಸಮುದಾಯಗಳಲ್ಲಿ ಒಂದಾದ ವೀರಶೈವ-ಲಿಂಗಾಯತ ರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ಪರಿಶೀಲನೆ ಉದ್ದೇಶದೊಡನೆ ರಾಜ್ಯ ಸರ್ಕಾರ ರಚಿಸಿರುವ ತಜ್ಞರ ಸಮಿತಿಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಈ ಸಂಬಂಧ ಶಶಿಧರ ಶ್ಯಾಮಸುಂದರ್ ಹಾಗೂ ಸತೀಶ್ ಎನ್ನುವವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳನ್ನು (ಪಿಐಎಲ್) ವಿಚಾರಣೆ ನಡೆಸಿದ  ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯಕ್ಕೆ ಬಂದಿದೆ.  ಇದರೊಡನೆ ನ್ಯಾಯಾಲಯವು ಕೇಂದ್ರ ಹಾಗೂ ರಾಜ್ಯ ಅಲ್ಪಸಂಖ್ಯತರ ಆಯೋಗಕ್ಕೆ ತುರ್ತು ನೋಟಿಸ್‌ ಜಾರಿಗೊಳಿಸಲು ಆದೇಶ ನಿಡಿ  ಮುಂದಿನ ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ಪೀಠವು "ತಜ್ಞರ ಸಮಿತಿ ಕಾರ್ಯಚಟುವಟಿಕೆಗಳೇನೇ ಇದ್ದರೂ ಅದು ಇದರ ಅಂತಿಮ ತೀರ್ಪಿಗೆ ಒಳಪಟ್ಟಿರತಕ್ಕದ್ದು. ಸಮಿತಿಗೆ ಕಾನೂನ್ ಉ ಚೌಕಟ್ಟಿನಲ್ಲಿ ಕೆಲಸ ಮಾಡಲು ಸ್ವಾತಂತ್ರವಿದ್ದು ಸಮಿತಿಯನ್ನು ರಚಿಸಿರುವ ಅಲ್ಪಸಂಖ್ಯಾತ ಆಯೋಗಕ್ಕೆ ಈ ರೀತಿಯ ಸಮಿತಿ ರಚಿಸುವ ಅಧಿಕಾರವೂ ಇದೆ. ಹೀಗಾಗಿ ಈ ವಿವಾದವನ್ನು ವಿವರವಾಗಿ ವಿಚಾರಣೆಗೆ ಒಳಪಡಿಸಬೇಕಲ್ಲದೆ ಸಮಿತಿಗೆ ತಡೆ ನೀಡಲು ಬರುವುದಿಲ್ಲ" ಎಂದು ಅಭಿಪ್ರಾಯ ನೀಡಿದೆ.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗವು ಡಿಸೆಂಬರ್ 22, 2017ರಂದು ರಚಿಸಿದ್ದ ಕರ್ನಾಟಕ ಹೈಕೋರ್ಟ್ ನ ಮಾಜಿ ನ್ಯಾಯಾಧೀಶ ನ್ಯಾ.ನಾಗಮೋಹನ್ ದಾಸ್ ನೇತೃತ್ವದ  ಸಮಿತಿಯ ಸಾಂವಿಧಾನಿಕ ಸಿಂಧುತ್ವವನ್ನು ಈ ಎರಡು ಅರ್ಜಿದಾರರು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.
SCROLL FOR NEXT