ರಾಜ್ಯ

ಕರ್ನಾಟಕ: ಸಂಕ್ರಾಂತಿ, ಗಣರಾಜ್ಯೋತ್ಸವ ದಿನಕ್ಕೆ ವಿಶೇಷ ರೈಲುಗಳ ವ್ಯವಸ್ಥೆ

Sumana Upadhyaya
ಬೆಂಗಳೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ರೈಲ್ವೆ ಇಲಾಖೆ ಯಶವಂತಪುರ-ಬೆಳಗಾವಿ-ಯಶವಂತಪುರ ತತ್ಕಾಲ್ ವಿಶೇಷ ರೈಲನ್ನು ನೀಡಲು ಇಲಾಖೆ ನಿರ್ಧರಿಸಿದೆ.
ಯಶವಂತಪುರ-ಬೆಳಗಾವಿ ತತ್ಕಾಲ್ ವಿಶೇಷ ರೈಲು ಯಶವಂತಪುರದಿಂದ ಜನವರಿ 12ರಂದು ರಾತ್ರಿ 8.15ಕ್ಕೆ ಹೊರಟು ಬೆಳಗಾವಿಗೆ ಬೆಳಗ್ಗೆ 8.10ಕ್ಕೆ ತಲುಪಲಿದೆ. ಮರುದಿನ ಅಂದರೆ ಶನಿವಾರ ದಾವಣಗೆರೆಯಿಂದ ಮುಂಜಾನೆ 2.20ಕ್ಕೆ ಮತ್ತು ಹರಿಹರದಿಂದ 2.45ಕ್ಕೆ ಹೊರಟು, ಹಾವೇರಿಯಿಂದ ನಸುಕಿನ ಜಾವ 3.52ಕ್ಕೆ, ಹುಬ್ಬಳ್ಳಿಯಿಂದ 5.15ಕ್ಕೆ, ಧಾರವಾಡದಿಂದ 5.52ಕ್ಕೆ, ಲೊಂಡಾದಿಂದ 7.08ಕ್ಕೆ ಹೊರಡಲಿದೆ.
ಬೆಳಗಾವಿ-ಯಶವಂತಪುರ ಸುವಿಧ ವಿಶೇಷ ರೈಲು ಬೆಳಗಾವಿಯಿಂದ ಜನವರಿ 28ರಂದು ಭಾನುವಾರ 5.15ಕ್ಕೆ ಹೊರಟು ಯಶವಂತಪುರವನ್ನು ಮರುದಿನ ಬೆಳಗ್ಗೆ 5 ಗಂಟೆಗೆ ತಲುಪಲಿದೆ. ಸೋಮವಾರ ಬಿರೂರಿನಿಂದ ಮಧ್ಯರಾತ್ರಿ 12.35ಕ್ಕೆ ಹೊರಟು ಅರಸೀಕೆರೆಯನ್ನು 1.45ಕ್ಕೆ ತಲುಪಲಿದೆ. ನಂತರ ತುಮಕೂರಿಗೆ ನಸುಕಿನ ಜಾವ 3.45ಕ್ಕೆ ತಲುಪಲಿದೆ.
ಗಣರಾಜ್ಯೋತ್ಸವಕ್ಕೆ ಸುವಿಧಾ ವಿಶೇಷ ರೈಲು: ಯಶವಂತಪುರ-ಬೆಳಗಾವಿ-ಯಶವಂತಪುರ ಸುವಿಧಾ ವಿಶೇಷ ರೈಲು ಗಣರಾಜ್ಯೋತ್ಸವಕ್ಕೆ ಸಂಚರಿಸಲಿದೆ.
ಶುಕ್ರವಾರ ದಾವಣಗೆರೆಗೆ 2.20 ಬೆಳಗಿನ ಜಾವ ಆಗಮಿಸಿ 2.22ಕ್ಕೆ ಅಲ್ಲಿಂದ ಹೊರಟು ಹರಿಹರಕ್ಕೆ 2.43ಕ್ಕೆ ತಲುಪಿ ಅಲ್ಲಿಂದ 2.45ಕ್ಕೆ ಹೊರಡಲಿದೆ. ಹಾವೇರಿಗೆ 3.50ಕ್ಕೆ ತಲುಪಿ ಅಲ್ಲಿಂದ 3.52ಕ್ಕೆ ಹೊರಡಲಿದೆ. ಹುಬ್ಬಳ್ಳಿಗೆ ಬೆಳಗಿನ ಜಾವ 5.15ಕ್ಕೆ ತಲುಪಲಿದೆ. ಧಾರವಾಡಕ್ಕೆ 5.50ಕ್ಕೆ ಆಗಮಿಸಿ 5.52ಕ್ಕೆ ಹೊರಡಲಿದೆ ಮತ್ತು ಲೊಂಡಾಕ್ಕೆ 7.06ಕ್ಕೆ ಆಗಮಿಸಿ ಅಲ್ಲಿಂದ 7.08ಕ್ಕೆ ಹೊರಡಲಿದೆ.
ರೈಲು ಸಂಖ್ಯೆ 82660 ಬೆಳಗಾವಿಯನ್ನು ಜನವರಿ 28ರಂದು ಸಾಯಂಕಾಲ 5.15ಕ್ಕೆ ಹೊರಟು ಯಶವಂತಪುರವನ್ನು ಮರುದಿನ ಬೆಳಗ್ಗೆ 5 ಗಂಟೆಗೆ ತಲುಪಲಿದೆ. ಸೋಮವಾರ ಬಿರೂರಿನಿಂದ 12.33ಕ್ಕೆ ಆಗಮಿಸಿ 12.35ಕ್ಕೆ ಅಲ್ಲಿಂದ ಹೊರಟು ಅರಸೀಕೆರೆಯನ್ನು 1.45ಕ್ಕೆ ಆಗಮಿಸಿ ಅಲ್ಲಿಂದ 1.50ಕ್ಕೆ ಹೊರಡಲಿದೆ. ತುಮಕೂರಿಗೆ 3.43ಕ್ಕೆ ಆಗಮಿಸಿ ಅಲ್ಲಿಂದ 3.45ಕ್ಕೆ ಹೊರಡಲಿದೆ.
ಯಶವಂತಪುರ-ನಿಜಾಮುದ್ದೀನ್-ಯಶವಂತಪುರ ಕರ್ನಾಟಕ ಸಂಪರ್ಕ ಕ್ರಾಂತಿ ವಾರಕ್ಕೆರಡು ರೈಲು ಮತ್ತು ಯಶವಂತಪುರ-ಚಂಡೀಗಢ-ಯಶವಂತಪುರ ಸಂಪರ್ಕ ಕಾಂತ್ರಿ ವಾರಕ್ಕೆರಡು ರೈಲು ಅರಸೀಕೆರೆ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ.
ಈ ಮಧ್ಯೆ, ಯಶವಂತಪುರ-ಪಾಂಡರ್ ಪುರ-ಯಶವಂತಪುರ ವಾರದ ತತ್ಕಾಲ್ ವಿಶೇಷ ರೈಲು 22 ಹೆಚ್ಚುವರಿ ಪ್ರಯಾಣ ನಡೆಸಲಿದೆ. ಯಶವಂತಪುರ-ಪಾಂಡರ್ ಪುರ ವಾರದ ತತ್ಕಾಲ್ ವಿಶೇಷ ರೈಲು ಯಶವಂತಪುರಕ್ಕೆ ಪ್ರತಿ ಗುರುವಾರ ಸಂಜೆ 6 ಗಂಟೆಗೆ ಫೆಬ್ರವರಿ 1ರಿಂದ ಜೂನ್ 28ರವರೆಗೆ ಸಂಚರಿಸಲಿದೆ.
SCROLL FOR NEXT